ಹೆಚ್ಚು ಮಕ್ಕಳಿದ್ದವರಿಗೆ ದೇಶದ ಸಂಪತ್ತು; ಮೋದಿ ಆರೋಪಕ್ಕೆ ಪ್ರತಿ ಪಕ್ಷಗಳ ತೀವ್ರ ಟೀಕೆ

Opposition Partys : ದೇಶವನ್ನು ಒಡೆಯುವ ಕೆಲಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರತರಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ನವದೆಹಲಿ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನೆಲ್ಲ ಹೆಚ್ಚು ಮಕ್ಕಳಿರುವವರಿಗೆ ಕೊಟ್ಟು ಬಿಡುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ತೀವ್ರ ಟೀಕೆಗೆ ಕಾರಣವಾಗಿದೆ.

ಪ್ರಧಾನಿ ಮೋದಿಯವರು ಹೇಟ್ ಸ್ಪೀಚ್ ನಲ್ಲಿ ನಿರತರಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಶ್ಃಅ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ದೇಶವನ್ನು ಒಡೆಯುವ ಕೆಲಸದಲ್ಲಿ ಪ್ರಧಾನಿ ನಿರತರಾಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ಭಾನುವಾರ ರಾಜಸ್ಥಾನದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನೆಲ್ಲ ಹೆಚ್ಚು ಮಕ್ಕಳಿರುವವರಿಗೆ ಕೊಟ್ಟು ಬಿಡುತ್ತದೆ ಎಂದು ಆಪಾದಿಸಿದ್ದರು.

ಈ ಹೇಳಿಕೆಗೆ ಪ್ರತಿ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತ ವಾಗಿದೆ. ಹಿಂದೂ ಮತಗಳಿಗಾಗಿ ಹಿಂದೂ ಮುಸ್ಲಿಂ ರನ್ನು ಒಡೆಯುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ ಎಂದೂ ವಿರೋಧ ಪಕ್ಷಗಳು ದೂರಿವೆ.

Author

error: