ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮುಸ್ಲಿಂ ಲೀಗ್ ಟೀಕೆಯ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿದೆ. ಅಜ್ಮೀರ್ ನ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸುಳ್ಳುಗಳ ಬಂಡಲ್. ಈ ಪ್ರಣಾಳಿಕೆಯ ಪ್ರತಿ ಪುಟ ದೇಶವನ್ನು ತುಂಡು ತುಂಡಾಗಿ ಒಡೆಯುವ ಯತ್ನ ಎಂದು ಹೇಳಿದ್ದರು.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಮುಸ್ಲೀಂ ಲೀಗ್ ಗೆ ಹೋಲಿಸುವ ಮೂಲಕ ಪ್ರಧಾನಿ ನ್ಬರೇಂದ್ರ ಮೋದಿಯವರು ಚುನಾವಣಾ ನೀತಿ ಸಂಹಿತೆಯ ವಿರುದ್ಧ ನಡೆದುಕೊಂಡಿದ್ದಾರೆ ಎಂಬುದು ಕಾಂಗ್ರೆಸ್ ಪಕ್ಷದ ದೂರಾಗಿದೆ. ಈ ದೂರನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ.
ಈ ನಡುವೆ ಪ್ರಧಾನಿ ಮೋದಿಯವರ ಈ ಹೇಳಿಕೆ ಕಾಂಗ್ರೆಸ್ ಪಕ್ಷದ ಹಲವು ನಾಯಕರ ಟೀಕೆಗೆ ಕಾರಣವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಮ್ಮ ಪೂರ್ವಜರು ಸ್ವಾತಂತ್ರ ಸಂಗ್ರಾಮದ ಸಂದರ್ಭದಲ್ಲಿ ಹೋರಾಟಕ್ಕೆ ಬೆಂಬಲ ನೀಡದೇ ಬ್ರೀಟೀಷರು ಮತ್ತು ಮುಸ್ಲೀಂ ಲೀಗ್ ಗೆ ಬೆಂಬಲ ನೀಡಿದ್ದರು ಎಂದು ಮೋದಿಯವರಿಗೆ ನೆನಪು ಮಾಡಿಕೊಟ್ಟಿದ್ದಾರೆ.
ಈಗಾಗಲೇ ಪ್ರಧಾನಿಯವರಿಂದಲೇ ಶ್ಲಾಘನೆಗೆ ಒಳಗಾಗಿರುವ ಚುನಾವಣಾ ಯೋಗ ಈ ದೂರನ್ನು ಏನು ಮಾಡುತ್ತದೆ ನೋಡಬೇಕು.







