ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯ ಸಂಪೂರ್ಣವಾಗಿ ಮರೆಯಾಗಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಸಂಘ ಪರಿವಾರದ ವಿರುದ್ಧ ಬರೆಯುವ ಪತ್ರಕರ್ತರ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದು ಅವರು ದೂರಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾ ಅವರು, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ನಿರಂತರವಾಗಿ ಕುಸಿಯುತ್ತಿದೆ. 180 ರಾಷ್ಟ್ರಗಳ ಪೈಕಿ ಭಾರತ 161 ನೆಯ ಸ್ಥಾನಕ್ಕೆ ಕುಸಿದಿದೆ ಎಂದು ಹೇಳಿದರು.

ಸರ್ವಾಧಿಕಾರಿ ಸರ್ಕಾರಗಳು ಮಾಧ್ಯಮಗಳನ್ನು ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಳ್ಳಲು ಸದಾ ಪ್ರಯತ್ನಿಸುತ್ತವೆ. ಭಾರತದಲ್ಲಿ ಕೇಂದ್ರ ಸರ್ಕಾರವಾನು ಹಾಡಿ ಹೊಗಳದ ಮಾಧ್ಯಮಗಳನ್ನು ಸದಾ ಗುರಿ ಮಾಡಲಾಗುತ್ತಿದೆ ಎಂದರು.

1920 ರಲ್ಲಿ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣವನ್ನು ವರದಿ ಮಾಡಿದ್ದಕ್ಕಾಗಿ ಆ ವಾಹಿನಿಗಳ ಲೈಸೆನ್ಸ್ ರದ್ದು ಪಡಿಸಿ ಕ್ರಮ ಕೈಗೊಳ್ಳಲಾಯಿತು. ಈಗ ಬಿಬಿಸಿ ಕೂಡ ಭಾರತದಲ್ಲಿ ಬಾಗಿಲು ಮುಚ್ಚುತ್ತಿದೆ ಇದು ಆತಂಕಕಾರಿ ಎಂದು ವಿಜಯನ್ ಹೇಳಿದರು.

Author

Leave a Reply

Your email address will not be published. Required fields are marked *