ನವದೆಹಲಿ : ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಇನ್ನಷ್ಟು ಕುಸಿದಿದೆ. 2024 ರ ಈ ವರದಿಯ ಪ್ರಕಾರ ಭಾರತದ ಪತ್ರಿಕಾ ಸ್ವಾತಂತ್ರ್ಯ ಪಾಕಿಸ್ತಾನಕ್ಕಿಂತ ಕಳಪೆ. ಅಲ್ಲಿರುವಷ್ಟು ಸ್ವಾತಂತ್ರ್ಯ ಭಾರತದಲ್ಲಿ ಇಲ್ಲ. ಪ್ಯಾರಿಸ್ ಮೂಲದ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಎಂಬ ಅಂತಾರಾಷ್ಟ್ರೀಯ ಎನ್ ಜಿ ಓ ಈ ವರದಿಯನ್ನು ಬಿಡುಗಡೆ ಮಾಡಿದೆ.
ಈ ವರದಿಗೂ ಭಾರತ ಸರ್ಕಾರ ರೀತಿ ಪ್ರತಿಕ್ರಿಯೆ ನೀಡಬಹುದು ಎಂಬುದು ಸ್ಪಷ್ಟ. ಒಂದೇ ಸಾಲು ಈ ವರದಿ ಸರಿಯಿಲ್ಲ. ಇವರಿಗೆ ಮೋದಿ ಕಂಡರೆ ಆಗುವುದಿಲ್ಲ..! ಈ ರೀತಿ ಪ್ರತಿಕ್ರಿಯೆ ಬರುವುದು ನಿರೀಕ್ಷಿತ. ವರದಿಯ ಪ್ರಕಾರ ವಿಶ್ವದ 180 ದೇಶಗಳಲ್ಲಿ ಭಾರತದ ಸ್ಥಾನ 159. ಪಾಕಿಸ್ತಾನ 152 ನೆಯ ಸ್ಥಾನ ಪಡೆದು ಭಾರತಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ.
ಇದೇ ವರದಿಯ ಪ್ರಕಾರ ಭಾರತ ಕಳೆದ ವರ್ಷ 161 ನೆಯ ಸ್ಥಾನ ಪಡೆದಿತ್ತು. ಈ ವರ್ಷ ಭಾರತದ ಸ್ಥಿತಿ ಇನ್ನಷ್ಟು ಹದ ಗೆಟ್ಟಿದೆ.
ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿ ಇರುವ ದೇಶಗಳೆಂದರೆ ಬಾಂಗ್ಲಾದೇಶ, 165, ಚೀನಾ 172, ಶ್ರೀಲಂಕಾ 150, ಪಾಕಿಸ್ತಾನ 152, ಅಫ್ಘಾನಿಸ್ಥಾನ 178 ರಷ್ಯಾ 12 ಈ ದೇಶಗಳನ್ನು ರೇಡ್ ಜೋನ್ ನಲ್ಲಿರುವ ದೇಶಗಳು ಎಂದು ಪರಿಗಣಿಸಲಾಗಿದೆ.
ಒಟ್ಟಾರೆಯಾಗಿ ಜಾಗತಿಕವಾಗಿ ಪತ್ರಿಕಾ ಸ್ವಾತಂತ್ರ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.






