Prajwal Revnna Case: ಮೂರು ದಿನ ಎಸ್‌ಐಟಿ ಕಸ್ಟಡಿಗೆ ಹೆಚ್‌ ಡಿ ರೇವಣ್ಣ

Prajwal Revnna Case: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಮೂರು ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಇಂದು ಸಂಜೆ ಆದೇಶ ನೀಡಿದರು.

ಬೆಂಗಳೂರು : ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಮೂರು ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಇಂದು ಸಂಜೆ ಆದೇಶ ನೀಡಿದರು.

ಇಂದು ಸಂಜೆ ಎಸ್ಐ ಟಿ ಅಧಿಕಾರಿಗಳು ಹೆಚ್ ಡಿ ರೇವಣ್ಣ ಅವರನ್ನು ಕೋರಮಂಗಲದದಲ್ಲಿ ನ್ಯಾಯಮೂರ್ತಿ ರವೀಂದ್ರ ಕಟ್ಟಿಮನಿ ಅವರ ನಿವಾಸದಲ್ಲಿ ಹಾಜರುಪಡಿಸಿ. ಐದು ದಿನಗಳ ಕಸ್ಟಡಿಗೆ ಕೇಳಿದ್ದರು. ಎರಡೂ ಕಡೆ ವಾದವನ್ನು ಆಲಿಸಿದರ ನ್ಯಾಯಮೂರ್ತಿಗಳು ಮೂರು ದಿನಗಳ ಕಸ್ಟಡಿ ನೀಡಿದರು.

ಇದಕ್ಕೂ ಮೊದಲು ಬೌರಿಂಗ್ ಆಸ್ಪತ್ರೆಯಲ್ಲಿ ಹೆಚ್ ಡಿ ರೇವಣ್ಣ ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರೇವಣ್ಣ, ತಮ್ಮ ಮೇಲೆ ಯಾವುದೆ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳಿಲ್ಲ. ಇದು ತಮ್ಮ ವಿರುದ್ಧ ರಾಜಕೀಯ ಷಡ್ಯಂತ್ರ ಎಂದು ಅವರು ಆರೋಪಿಸಿದರು.

Author

error: