BBC INDIA ನ್ಯೂಸ್ ರೂಂ ಬಂದ್; ಭಾರತೀಯರ ಮಾಲಿಕತ್ವದ ಹೊಸ ಕಂಪೆನಿ ಪ್ರಾರಂಭ, 1940 ರಲ್ಲಿ ಪ್ರಾರಂಭವಾಗಿದ್ದ ಬಿಬಿಸಿ ಕೊನೆ ಉಸಿರು..

ನವದೆಹಲಿ: ಪತ್ರಿಕೋದ್ಯಮದ ಇನ್ನೊಂದು ಹೆಸರು BBC. ಇದು ಈಗ ಭಾರತದಲ್ಲಿ ತನ್ನ ನ್ಯೂಸ್ ರೂಂ ಅನ್ನು ಸ್ಥಗಿತಗೊಳಿಸುತ್ತಿದೆ. BBCಯ ಮೇಲೆ ನಡೆಸಿದ ತೆರಿಗೆ ದಾಳಿ ಮತ್ತು ಎಫ್ ಡಿ ಐ ಬಗ್ಗೆ ನಡೆಸುತ್ತಿರುವ ಸತತ ವಿಚಾರಣೆಯಿಂದ ಬಿಬಿಸಿ ಈ ನಿರ್ಧಾರವನ್ನು ಕೈಗೊಂಡಿದೆ.

ಪ್ರತಿಶತ 100 ರಷ್ಟು ವಿದೇಶಿ ಬಂಡವಾಳ ಹೂಡಿಕೆಯ ನ್ಯೂಸ್ ರೂಂ ಗೆ ಬದಲಾಗಿ ಕಲೆಕ್ಟೀವ್ ನ್ಯೂಸ್ ರೂಂ ಕಂಪನಿ ಅಸ್ಥಿತ್ವಕ್ಕೆ ಬರಲಿದೆ. ಈ ಕಂಪೆನಿಯಲ್ಲಿ ಬಿಬಿಸಿ ಪ್ರತಿಶತ 26 ರಷ್ಟು ಬಂಡವಾಳ ಹೂಡಲಿದೆ. ಈ ಬಗ್ಗೆ ಭಾರತ ಸರ್ಕಾರದ ಒಪ್ಪಿಗೆಯನ್ನು ಅದು ಕೇಳಿದೆ.

BBC ಇಂಡಿಯಾ ವಿದೇಶಿ ನೇರ ಬಂಡವಾಳ ಹೂಡಿಕೆಯ ಸಂಸ್ಥೆಯಾಗಿತ್ತು. ಇದನ್ನು ಮುಚ್ಚುವ ತೀರ್ಮಾನವನ್ನು ಅದು ಕೈಗೊಂಡಿದೆ. ಜೊತೆಗೆ ಭಾರತದಲ್ಲಿ ತನ್ನ ಸುದಿ ಪ್ರಸಾರದ ಕಂಪೆನಿಯ ಪುನರ್ ರಚನೆ ಮಾಡಲಿದೆ. ಬಿಬಿಸಿ ಇಂತಹ ಕ್ರಮಕ್ಕೆ ಮುಂದಾಗಿರುವುದು ಇದೇ ಮೊದಲು.

ಸುಮಾರು ಒಂದು ವರ್ಷದ ಹಿಂದೆ ಭಾರತದ ವರಮಾನ ತೆರಿಗೆ ಅಧಿಕಾರಿಗಳು ತೆರಿಗೆ ನಿಯಮಗಳ ಉಲ್ಲಂಘನೆಯ ಕಾರಣ ನೀಡಿ ತನಿಖೆ ನಡೆಸಿದ್ದರು. ಇದಾದ ನಂತರ ಬಿಬಿಸಿ ಭಾರತದಲ್ಲಿ ತನ್ನ ಸುದ್ದಿ ಪರವಾನಿಗೆಯನ್ನು ಭಾರತೀಯ ನೌಕರರು ಸ್ಥಾಪಿಸಿರುವ ಪ್ರೈವೇಟ್ ಲಿಮಿಟೆಡ್ ಕಂಪೆನಿಗೆ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿದೆ.
ಬಹುಮಟ್ಟಿಗೆ ಮುಂದಿನ ವಾರ ಕಲೆಕ್ಟೀವ್ ನ್ಯೂಸ್ ರೂಂ ಹೆಸರಿನ ಹೊಸ ಕಂಪೆನಿ ಕಾರ್ಯಾರಂಭ ಮಾಡಲಿದೆ.

ನ್ಯೂಸ್ ರೂಂ ಕಂಪೆನಿಯ ಸಿಇಓ ಪ್ರಕಾರ ಬಿಬಿಸಿ ತನ್ನ ಪ್ರಸಾರ ಅನುಮತಿ ಪತ್ರವನ್ನು ಇನ್ನೊಂದು ಕಂಪೆನಿಗೆ ಕೊಟ್ಟ ಬೇರೆ ಉದಾಹರಣೆ ಇಲ್ಲ. ಇದು ಬಿಬಿಸಿಯ ಇತಿಹಾಸದಲ್ಲಿ ಇದೇ ಮೊದಲು. ಈಗಿನ ವರೆಗೆ ಭಾರತದಲ್ಲಿ ಬಿಬಿಸಿಯ ಕಾರ್ಯನಿರ್ವಹಣೆಯನ್ನು ಬಿಬಿಸಿ ಇಂಡಿಯಾ ಮಾಡುತ್ತಿತ್ತು. ಬಿಬಿಸಿ ಇಂಡಿಯಾ ಸಂಸ್ಥೆಯಲ್ಲಿ ಪ್ರತಿಶತ 99ರಷ್ಟು ಶೇರುಗಳನ್ನು ಅದೇ ಹೊಂದಿತ್ತು. ಆದರೆ 2020 ರಲ್ಲಿ ಭಾರತದಲ್ಲಿ ರೂಪಿಸಲಾದ ಹೊಸ ಕಾನೂನಿನ ಪ್ರಕಾರ ಯಾವುದೇ ವಿದೇಶಿ ಬಂಡವಾಳ ಪ್ರತಿಶತ ೨೬ ಅನ್ನು ಮೀರುವಂತಿಲ್ಲ.

ಭಾರತದಲ್ಲಿ ಬಿಬಿಸಿ ಪ್ರಾರಂಭವಾಗಿದ್ದು 1940 ರಲ್ಲಿ ಈಗ ಭಾರತದಲ್ಲಿ ಬಿಬಿಸಿಯ 40 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಇಂಗ್ಲೆಂಡ್ ಬಿಟ್ಟರೆ ಬಿಬಿಸಿಯ ಅತಿ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿರುವುದು ಭಾರತದಲ್ಲೇ.

ಕಳೆದ ವರ್ಷ ಬಿಬಿಸಿ ಗುಜರಾತ್ ದಂಗೆಗೆ ಸಂಬಂಧಿಸಿದಂತೆ ಸಾಕ್ಶ್ಯ ಚಿತ್ರವೊಂದನ್ನು ಪ್ರಸಾರ ಮಾಡಿತು. ಇದಾದ ತಕ್ಷಣ ಕಳೆದ ವರ್ಷದ ಫೆಬ್ರವರಿಯಲ್ಲಿ ಬಿಬಿಸಿಯ ದೆಹಲಿ ಮತ್ತು ಮುಂಬೈ ಕಚೇರಿಗಳ ಮೇರೆ ವರಮಾನ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.

Author

Leave a Reply

Your email address will not be published. Required fields are marked *