ಈ ಅವಿವಾಹಿತ ಯುವಕನಿಗೆ ಒಬ್ಬಂಟಿ ಮೋದಿಯೇ ದೇವರು : ಮೋದಿ ಪ್ರಧಾನಿಯಾಗಲಿ ಎಂದು ಕಾಳಿ ಮಾತೆಗೆ ಕೈಬೆರಳು ಅರ್ಪಿಸಿದ ಅಭಿಮಾನಿ

ಕಾರವಾರ : ಅಭಿಮಾನ ಅನ್ನೋದು ಒಂದು ಹುಚ್ಚು. ಯಾವನು ತನ್ನ ವ್ಯಕ್ತಿತ್ವನ್ನು ಕಳೆದುಕೊಳ್ಳುತ್ತಾನೋ ಅವನು ಇನ್ಯಾರದೋ ಅಭಿಮಾನಿಯಾಗಿರ್ತಾನೆ. ಅಭಿಮಾನಿಗಳಿಗೆ ಬಹುತೇಕ ಸಂದರ್ಭದಲ್ಲಿ ತಾರತಮ್ಯ ಜ್ಞಾನ ಇರೋದಿಲ್ಲ. ಹೀಗಾಗಿ ಅವರ ಏನು ಮಾಡೋದಕ್ಕೂ ಸಿದ್ದರಿರ್ತಾರೆ. ಇಂತಹ ಸುದ್ದಿಯೊಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಬಂದಿದೆ, ಈ ಸ್ಟೋರಿಯ ನಾಯಕ ನರೇಂದ್ರ ಮೋದಿ ಅಭಿಮಾನಿ. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಕಾಳಿ ಮಾತೆಗೆ ತನ್ನ ಕೈ ಬೆರಳನ್ನೇ ನೈವೇದ್ಯವಾಗಿ ಅರ್ಪಿಸಿದ ಅಭಿಮಾನಿ ಈತ.

ಕಾರವಾರ ನಗರದ ಸೋನಾರವಾಡದ ವ್ಯಕ್ತಿ. ಈತನ ಹೆಸರು ಅರುಣ್ ವರ್ಣೇಕರ್. ಈತ ಅವಿವಾಹಿತ. ಮದುವೆಯಗಿದ್ದರೆ ಹೀಗೆ ಮಾಡುತ್ತಿರಲಿಲ್ಲವೇನೋ. ಮನೆಯಲ್ಲಿ ಹೆಂಡತಿ ಇದ್ದಿದ್ದರೆ ಹುಚ್ಚು ಇರ್ತಿರಲಿಲ್ಲ.
ಈ ಅವಿವಾಹಿತ ಎಂತಹ ಹುಚ್ಚ ಎಂದರೆ ಮನೆಯಲ್ಲಿ ಗುಡಿಯೊಂದನ್ನು ನಿರ್ಮಿಸಿದ್ದಾನೆ. ಇದು ಮೋದಿ ಗುಡಿ ಅಥವಾ ದೇವಸ್ಥಾನ. ಅಲ್ಲಿ ಪ್ರತಿದಿನ ಪೂಜೆ.

ಅವಿವಾಹಿತ ಅಭಿಮಾನಿಗೆ ಮದುವೆಯಾದರೂ ಹೆಂಡತಿ ಇಲ್ಲದ ಮೋದಿಯೇ ದೇವರು. ಇದಕ್ಕಾಗಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ತನ್ನ ಕೈಬೆರಳನ್ನು ದೇವಿಗೆ ಅರ್ಪಿಸಿದ್ದಾನೆ…!.

ಮನೆಯಲ್ಲಿ ಮೋದಿಗಾಗಿ ಗುಡಿಯನ್ನು ನಿರ್ಮಿಸಿ ದಿನಾಲೂ ಪೂಜೆ ಮಾಡುತ್ತಾ ಬಂದಿರುವ ಅರುಣ್.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಕಾಳಿಮಾತೆಗೆ ಬೇಡಿಕೊಂಡಿದ್ದಾರೆ. ಇದೇ ವೇಳೆ ತನ್ನ ಕೈ ಬೆರಳು ತುಂಡು ಮಾಡಿ, ನೈವೇದ್ಯವಾಗಿ ದೇವಿಗೆ ಅರ್ಪಿಸಿದ್ದಾನೆ.

Author

Leave a Reply

Your email address will not be published. Required fields are marked *