ತುಮಕೂರು : ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಮಾಜಿ ಸಚಿವ ಜೆ. ಸಿ. ಮಾಧುಸ್ವಾಮಿ ಈಗ ಕೋಪದಲ್ಲಿದ್ದಾರೆ. ತುಮಕೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ನಿರಾಸೆಯಾಗಿದೆ.
ಬೆಂಗಳೂರಿನವರಾದ ವಿ. ಸೋಮಣ್ಣ ಅವರಿಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡುವ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಎರಡು ದಿನಗಳ ಹಿಂದೆ ತುಮಕೂರಿಗೆ ಬಂದಿದ್ದ ವಿ. ಸೋಮಣ್ಣ ನಿಮ್ಮನ್ನುನೋಡೋದಕ್ಕೆ ಬರ್ತೀನಿ ಎಂದು ಎಂದು ಮಾಧು ಸ್ವಾಮಿಯವರಿಗೆ ಹೇಳಿದ್ದರು. ನನ್ನನ್ನು ನೋಡುವ ಅಗತ್ಯ ಇಲ್ಲ ಎಂದು ಮಾಧು ಸ್ವಾಮಿ ಹೇಳಿದ್ದರು.
ತುಮಕೂರು ಕ್ಷೇತ್ರದಿಂದ ಹೊರಗಿನಿಂದ ಬಂದವರು ಒಮ್ಮೆಯೂ ಗೆದ್ದಿಲ್ಲ, ಈಗಲೂ ಸೋಮಣ್ಣ ಗೆಲ್ಲುವುದಿಲ್ಲ ಎನ್ನುತ್ತಾರೆ ಮಾಧುಸ್ವಾಮಿ.
ಈ ನಡುವೆ ಕಾಂಗ್ರೆಸ್ ಪಕ್ಷ ಮಾಧು ಸ್ವಾಮಿ ಅವರ ಸಂಪರ್ಕದಲ್ಲಿದೆ ಎಂದು ಹೇಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾಧು ಸ್ವಾಮಿ ಅವರಿಗೆ ಕಾಂಗ್ರೆಸ್ ಗೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಮಾಧು ಸ್ವಾಮಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಧು ಸ್ವಾಮಿ ಅವರು ಕಾಂಗ್ರೆಸ್ ಗೆ ಬಂದು ಚುನಾವಣೆಗೆ ನಿಲ್ಲುತ್ತಾರೆಯೆ ಎಂಬುದು ಈಗಿನ ಕುತೂಹಲ..
