ಚುನಾವಣಾ ದೇಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಮತ್ತೊಮ್ಮೆ ತಪರಾಕಿ ನೀಡಿದೆ. ದೇಣಿಗೆ ವಿವರಗಳನ್ನು ನೀಡುವಾಗ ಸೆಲೆಕ್ಟೀವ್ ಆಗಬೇಡಿ ಎಂದೂ ಎಸ್ ಬಿ ಐಗೆ ನ್ಯಾಯಾಲಯ ಹೇಳಿದೆ.

ಇದಿಷ್ಟೇ ಸಾಲದು, ಎಲ್ಲ ಮಾಹಿತಿ ಬೇಕು.. ವಿವರ ಬಹಿರಂಗದಲ್ಲೂ ಸೆಲೆಕ್ಟೀವ್ ಆಗದಿರಿ ಎಂದೂ ನ್ಯಾಯಾಲಯ ಹೇಳಿದೆ. ಇದರಿಂದಾಗಿ ಕೆಲವು ವಿವರಗಳನ್ನು ಮುಚ್ಚಿಡಲು ಎಸ್ ಬಿ ಐ ಯತ್ನಿಸುತ್ತಿದೆ ಎಂಬ ಅನುಮಾನ ಮೂಡುವಂತಾಗಿದೆ. ಇದು ಎಸ್ ಬಿ ಐ ಗೆ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.
ನೀವು ಎಲ್ಲ ಮಾಹಿತಿಗಳನ್ನು ಭಹಿರಂಗ ಪಡಿಸಬೇಕು. ನಿಮಗೆ ಬೇಕಾದಷ್ಟು ವಿವರಗಳನ್ನು ಮಾತ್ರ ನೀಡುವುದು ಸರಿಯಲ್ಲ ಎಂದಿದೆ ಸುಪ್ರೀಂ ಕೋರ್ಟ್.

ಚುನಾವಣಾ ಬಾಂಡ್ ಗೆ ಸಂಬಂಧಿಸಿದ ಯುನಿಕ್ ನಂಬರ್ ಅನ್ನು ಬ್ಯಾಂಕ್ ನೀಡಿರಲಿಲ್ಲ. ಇದರಿಂದಾಗಿ ಯಾವ ಯಾವ ಕಾರ್ಪುರೇಟ್ ಸಂಸ್ಥೆಗಳು ಯಾವ ಯಾವ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿವೆ ಎಂಬ ವಿವರ ದೊರಕುತ್ತಿರಲಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ ಎಲ್ಲ ವಿವರಗಳನ್ನು ಸಲ್ಲಿಸಿ ಇದಕ್ಕೆ ಸಂಬಂಧಿಸಿದಂತೆ ಆಫಿಡೆವಿಟ್ ಸಲ್ಲಿಸುವಂತೆಯೂ ಬ್ಯಾಂಕ್ ನ ಅಧ್ಯಕ್ಷರಿಗೆ ಸೂಚಿಸಿದೆ.

Author

Leave a Reply

Your email address will not be published. Required fields are marked *