ತನ್ನ ಮಗನ ಸೋಲಿಗೆ ಹಾರೈಸಿದ ಅಪ್ಪ- ಮಗ ಪ್ರತಿನಿಧಿಸುವ ಪಕ್ಷವೂ ಗೆಲ್ಲದಿರಲಿ ಎಂದ ಅಪರೂಪದ ರಾಜಕಾರಣಿ…

ನನ್ನ ಮಗ ಸೋಲಬೇಕು, ಅವರ ಪಕ್ಷವೂ ಗೆಲ್ಲಕೂಡದು. ಕಾಂಗ್ರೆಸ್ ನಾಯಕರ ಮಕ್ಕಳು ಬಿಜೆಪಿ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ

ತಿರುವನಂತಪುರಂ : ಇವತ್ತಿನ ಕಾಲವೇ ಬೇರೆ. ತಮ್ಮ ಮಕ್ಕಳಿಗೆ ಪುನರ್ ವಸತಿ ಕಲ್ಪಿಸಲು ಯತ್ನಿಸುವ ರಾಜಕಾರಣಿಗಳು. ಮಗನಿಗೆ ಟಿಕೆಟ್ ಕೊಡುವ ಪಕ್ಷವೇ ಅಪ್ಪನ ಪಕ್ಷ. ಇಲ್ಲದಿದ್ದರೆ ಇಲ್ಲ. ಅಪ್ಪ, ಮಕ್ಕಳು. ಸೊಸೆ, ಅಳಿಯಂದಿರು ಹೀಗೆ ತಮ್ಮ ಕುಟುಂಬದವರಿಗೆ ಟಿಕೆಟ್ ಕೊಡಿಸಲು ಹಿಂಜರಿಕೆ ಇಲ್ಲ. ಅದಕ್ಕಾಗಿ ಏನು ಮಾಡುವುದಕ್ಕೂ ಸಿದ್ಧ.

ಕುಮಾರಣ್ಣನ ಸಲುವಾಗಿ ಬಿಜೆಪಿಗೆ ಬೆಂಬಲ ನೀಡಿದ ದೇವೇಗೌಡರು, ವಿಜಯೇಂದ್ರರ ಅಧ್ಯಕ್ಷ ಸ್ಥಾನಕ್ಕಾಗಿ ಎಲ್ಲ ರೀತಿಯ ಒತ್ತಡ ಹೇರಿದ ಯಡಿಯೂರಪ್ಪ.. ತಮ್ಮ ಮಕ್ಕಳನ್ನು ಲೋಕಸಭಾ ಚುನಾವಣೆಗೆ ಇಳಿಸಿದ ಕಾಂಗ್ರೆಸ್ ಸಚಿವರು. ಇದಕ್ಕೆ ತಲೆದೂಗಿದ ಕಾಂಗ್ರೆಸ್ ಹೈಕಮಾಂಡ್ ಇದೆಲ್ಲ ಯಾರಿಗೂ ದೊಡ್ಡ ವಿಶಯ ಅನ್ನಿಸುವುದಿಲ್ಲ. ಸಾಮಾನ್ಯ ಜನರಂತೂ ಕುಟುಂಬ ರಾಜಕಾರಣವನ್ನು ಒಪ್ಪಿಬಿಟ್ಟಿದ್ದಾರೆ. ನಮ್ಮ ಸಾಹೇಬರ ಮಗ, ಮಗಳೂ ಎಂದು ಸಂತೋಷ ಪಡುತ್ತಾರೆ.

ಇಂತವರ ನಡುವೆ ಒಬ್ಬರಿದ್ದಾರೆ. ಅವರು ಮಗ ಚುನಾವಣೆಯಲ್ಲಿ ಸೋಲಲಿ ಎಂದು ಹಾರೈಸುತ್ತಿದ್ದಾರೆ. ಹಾಗೆ ಮಗ ಪ್ರತಿನಿಧಿಸುವ ಪಕ್ಷ ಯಾವ ಕಾರಣಕ್ಕೂ ಗೆಲ್ಲಲೂಡದು ಎಂದು ಹೇಳುತ್ತಿದ್ದಾರೆ.

ಅವರು ಬೇರೆ ಯಾರೂ ಅಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ್ ಎ.ಕೆ. ಅಂಟೋನಿ. ಬಹಳ ವರ್ಷಗಳ ಕಾಲ ಕಾಂಗ್ರೆಸ್ ನ ಪ್ರಭಾವಿ ನಾಯಕರಾಗಿದ್ದವರು. ಗಾಂಧಿ ಕುಟುಂಬದ ಆಪ್ತರು. ಸಚಿವರಾಗಿ ತಾವು ನಿಭಾಯಿಸಿದ ಖಾತೆಗಳಲ್ಳಿ ಭ್ರಷ್ಟಾಚಾರ ನಡೆಯದಂತೆ ನೋಡಿಕೊಂಡವರು.

ಅವರ ಪುತ್ರ ರತ್ನ ಬಿಜೆಪಿ ಸೇರಿದ್ದಾರೆ. ಬಿಜೆಪಿಯಿಂದ ಲೋಕಸಭಾ ಚುನಾವಣೆಗೂ ಇಳಿದಿದ್ದಾರೆ.

ಕುರಿತು ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು, ನನ್ನ ಮಗ ಸೋಲಬೇಕು, ಅವರ ಪಕ್ಷವೂ ಗೆಲ್ಲಕೂಡದು. ಕಾಂಗ್ರೆಸ್ ನಾಯಕರ ಮಕ್ಕಳು ಬಿಜೆಪಿ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ, ಎಂದು ಅವರು ಹೇಳಿದರು.

Author

error: