ಬಿಜೆಪಿ ಹಿರಿಯ ನಾಯಕ ಈಶ್ವರಪ್ಪ ಅವರಿಗೆ ಕೋಪ ಬಂದಿದೆ. ಸದ್ಯಕ್ಕಂತೂ ಅವರ ಕೋಪ ಶಮನವಾಗುತ್ತಿಲ್ಲ. ಈಗ ಈಶ್ವರಪ್ಪ ಅವರ ಮನವೊಲಿಸುವ ಜವಾಬ್ದಾರಿ ಬಿ.ಎಲ್. ಸಂತೋಷ್ ಅವರ ಹೆಗಲಿಗೆ ಬಂದಿದೆ. ಸಂತೋಷ್ ಅವರ ಗುಂಪಿಗೆ ಸೇರಿರುವ ಈಶ್ವರಪ್ಪ ಈಗ ಸಂತೋಷ್ ಅವರ ಮಾತು ಕೇಳುತ್ತಾರೆಯೆ ?
ನಾಳೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಈಶ್ವರಪ್ಪ ಅವರ ಕೋಪ ಶಮನವಾಗದಿದ್ದರೆ ಅದು ಪಕ್ಷಕ್ಕೆ ಮುಜುಗರ ಉಂಟು ಮಾಡುವುದು ಸಹಜ. ಹೀಗಾಗಿ ಪಕ್ಷದ ವರಿಷ್ಟರು ಈಶ್ವರಪ್ಪ ಅವರ ಮನವೊಲಿಸಿ ಎಂದು ಬಿ.ಎಲ್. ಸಂತೋಷ್ ಅವರಿಗೆ ತಿಳಿಸಿದ್ದಾರೆ.
ಆದರೆ ಈಶ್ವರಪ್ಪ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ. ತಮ್ಮ ಹೊರಾಟ ಯಡಿಯೂರಪ್ಪ ಅವರ ವಿರುದ್ಧ ಎಂದೂ ಅವರು ಪದೇ ಪದೇ ಸ್ಪಷ್ಟಪಡಿಸುತ್ತಿದ್ದಾರೆ. ಯಾವ್ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿಲ್ಲ ಎಂದು ಹೇಳುತ್ತಿರುವ ಈಶ್ವರಪ್ಪ ಅವರ ಮುಂದಿನ ನಡೆ ಏನು ಎನ್ನುವುದು ಈಗಿನ ಕುತೂಹಲ
