ಮಾಜಿ ಉಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಬೆಳಗಾವಿ ಕ್ಷೇತ್ರದಿಂದ ಟಿಕೆಟ್ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಳಗಾವಿಯ ಹಲವು ನಾಯಕರು ಶೆಟ್ಟರ್ ಗೆ ಬೆಳಗಾವಿಯಿಂದ ಟಿಕೆಟ್ ನೀಡದಿಂದ ಒತ್ತಾಯಿಸಲು ದೆಹಲಿಗೆ ನಿಯೋಗ ಕೊಂಡೊಯ್ಯಲು ನಿರ್ಧರಿಸಿದ್ದಾರೆ.

ಮಾಜಿ ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯಸಭಾ ಸದಸ್ಯ ಕಡಾಡಿ, ಸಂಜಯ ಪಾಟೀಲ್, ಬೆನಕೆ ಮೊದಲಾದ ನಾಯಕರು ಶೆಟ್ಟರ್ ಗೋ ಬ್ಯಾಕ್ ಅಭಿಯಾನದಲ್ಲಿ ತೊಡಗಿದ್ದಾರೆ.

ಈ ನಡುವೆ ರಮೇಶ್ ಜಾರಖೀಹೊಳಿ, ಬಾಲಚಂದ್ರ ಜಾರಕೀಹೊಳಿ ಅವರಿಗೂ ಶೆಟ್ಟರ್ ಬೆಳಗಾವಿಗೆ ಬಂದು ಸ್ಪರ್ಢಿಸುವುದು ಇಷ್ಟವಿಲ್ಲ. ಜಗದೀಷ್ ಶೆಟ್ಟರ್ ಅವರಿಗೂ ಬೆಳಗಾವಿಯಲ್ಲಿ ಸ್ಪರ್ಧಿಸುವುದಕ್ಕೆ ಆಸಕ್ತಿ ಇರಲಿಲ್ಲ. ಧಾರವಾಡ ಅಥವಾ ಹಾವೇರಿಯಿಂದ ಸ್ಪರ್ಧಿಸಲು ಅವರು ಬಯಸಿದ್ದರು. ಆದರೆ ಅವರಿಗೆ ಈ ಎರಡೂ ಕ್ಷೇತ್ರದಿಂದ ಟಿಕೆಟ್ ಸಿಗಲಿಲ್ಲ.. ಇದರಿಂದಾಗು ಮುನಿಸಿಕೊಂಡಿದ್ದ ಶೆಟ್ಟರ್ ಅವರನ್ನು ಯಡಿಯೂರಪ್ಪ ಸಮಾಧಾನ ಪಡಿಸಿದ್ದರು. ಬೆಳಗಾವಿಯಿಂದ ಸ್ಪರ್ಧಿಸುವ್ಂತೆ ಮನವೊಲಿಸಿದ್ದರು. ಆದರೆ ಈಗ ಬೆಳಗಾವಿಯ ನಾಯಕರೇ ಶೆಟ್ಟರ್ ಗೋ ಬ್ಯಾಕ್ ಅನ್ನುತ್ತಿದ್ದಾರೆ.ಓಟ್ಟಿನಲ್ಲಿ ಜಗದೀಶ್ ಶೆಟ್ಟರ್ ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ.

Author

Leave a Reply

Your email address will not be published. Required fields are marked *