ವಿಶೇಷ ವರದಿ,
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಮೆಜರ್ ಸರ್ಜರಿಗೆ ಸಮಯ ನಿಗಧಿ ಮಾಡಿದೆ. ಸಚಿವ ಸಂಪುಟ ಪುನರ್ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧಾರ ಮಾಡಿದ್ದಾರೆ.
ಸರ್ಕಾರ ರಚನೆಯಾಗಿ ಒಂದೂವರೆ ವರ್ಷ ತುಂಬಿದ ಬೆನ್ನಲ್ಲೇ ಸಂಪುಟ ಪುನರ್ ರಚನೆಗೆ ಮುಂದಾಗಿದ್ದಾರೆ. ಹಿರಿಯ ಶಾಸಕರಿಂದ ಒಂದು ಕಡೆ ಸಂಪುಟ ಪುನರ್ ರಚನೆಗೆ ಒತ್ತಡ ಹೆಚ್ಚಾಗಿದ್ದು, ಮತ್ತೊಂದು ಕಡೆ ಇಲಾಖೆಯನ್ನು ಸರಿಯಾಗಿ ನಿರ್ವಹಿಸದ ಸಚಿವರಿಗೆ ಕೋಕ್ ಕೊಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆಯನ್ನ ಕೂಡ ನೀಡಿದೆ.
ಈ ಬೆನ್ನಲ್ಲೇ ಆಲರ್ಟ್ ಆದ ಮುಖ್ಯಮಂತ್ರಿಗಳು ಡಿಸೆಂಬರ್ ತಿಂಗಳಲ್ಲಿ ಸಂಪುಟ ಪುನರ್ ರಚನೆಗೆ ಮುಂದಾಗಿದ್ದಾರೆ. ಹೊಸ ಸಂಪುಟದಲ್ಲಿ ಎಂಟರಿಂದ ಹತ್ತು ಸಚಿವರಿಗೆ ಕೋಕ್ ನೀಡಲು ಮುಂದಾಗಿರುವ ನಾಯಕರು ಪಕ್ಷದಲ್ಲಿನ ಹಿರಿಯರು ಹಾಗೂ ಯುವಕರಿಗೆ ಅವಕಾಶ ಕೊಡಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ.
ಯಾರಿಗೆಲ್ಲ ಕೋಕ್..?
– ಡಿ.ಸುಧಾಕರ್ (ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವರು)
– ಎಸ್ ಮಧು ಬಂಗಾರಪ್ಪ (ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು)
– ಆರ್ ಬಿ ತಿಮ್ಮಪೂರ (ಅಬಕಾರಿ ಇಲಾಖೆ ಸಚಿವರು)
– ಕೆ.ಎನ್ ರಾಜಣ್ಣ (ಸಹಕಾರ ಇಲಾಖೆ ಸಚಿವರು)
– ಕೆ.ಎಚ್ ಮುನಿಯಪ್ಪ (ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರು)
– ಶಿವನಾಂದ ಪಾಟೀಲ್ (ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರು)
– ಬಿ ಎಸ್ ಸುರೇಶ್ ( ನಗಾರಾಭಿವೃದ್ದಿ ಇಲಾಖೆ ಸಚಿವರು)
– ಶರಣಪ್ಪ ದರ್ಶನಾಪುರ ( ಸಣ್ಣ ಪ್ರಮಾಣದ ಕೈಗಾರಿಕೆಗಳು ಸಚಿವರು)
– ಮಂಕಾಳ ವೈದ್ಯ (ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು )
ಯಾರಿಗೆಲ್ಲ ಅವಕಾಶ?
– ಬಿ ಕೆ ಹರಿಪ್ರಸಾದ್ ( ವಿಧಾನ ಪರಿಷತ್ ಸದಸ್ಯರು )
– ಎ ಕೃಷ್ಣಪ್ಪ (ವಿಜಯನಗರ ಶಾಸಕರು)
– ಆರ್ ವಿ ದೇಶಪಾಂಡೆ (ಹಳಿಯಾಳ ಶಾಸಕರು)
– ಪಿ ಎಂ ನರೇಂದ್ರ ಸ್ವಾಮಿ (ಮಳವಳ್ಳಿ ಶಾಸಕರು
– ಸಿ ಎಸ್ ನಾಡಗೌಡ (ಮುದ್ದೇಬಿಹಾಳ ಶಾಸಕರು)
– ಬಸವರಾಜ ರಾಯರೆಡ್ಡಿ (ಯಲಬುರ್ಗಾ ಶಾಸಕರು)
