ನವದೆಹಲಿ : ಈ ಬಾರಿ ಏನ್ರಿ ವೇವ್ ಅಂದ್ರು ಒಬ್ಬರು. ಅವರು ರಾಜಕೀಯ ಪಕ್ಷವೊಂದರ ಕಟ್ಟಾ ಅಭಿಮಾನಿ.
ಯಾರದ್ದು ಸಾರ್ ವೇವು ಅಂದೆ..

ಇನ್ಯಾರದು ? ಇನ್ಯಾರ್ದು ವೇವ್ ಇರೋಕೆ ಸಾಧ್ಯ ಇಲ್ಲ. ಇದ್ರೆ ಅವರದ್ದು ಮಾತ್ರ ಅಂದ್ರು. ಬೆಳಿಗ್ಗೆ ಎದ್ರೆ ಒಂದು ವೇವು, ಮಧ್ಯಾಹ್ನ ಇನ್ನೊಂದು ವೇವು. ಸಾಯಂಕಾಲ ಮತ್ತೊಂದು. ರಾತ್ರಿ ಇನ್ನೊಂದು ಅಂತ ವಿವರಿಸಿದ್ರು.
ನೀವು ಹೇಳ್ತಾ ಇರೋದು ಅವರು ಹಾಕೋ ಬಟ್ಟೆ ಬಗ್ಗೇನಾ ಅಂತ ಕೇಳಿದೆ.

ಅಲ್ರಿ ಅವರದು ಹಿಂದೂ ವೇವ್.. ಅದು ಬಂತೂ ಅಂದ್ರೆ ಉಳಿದವರೆಲ್ಲ ಹಾರಿ ಹೋಗ್ತಾರೆ. ಹೌದಾ ? ಇಂಡಿಯಾನೂ ಹಾರಿ ಹೋಗುತ್ತೆ ಬೇಕಾದ್ರೆ ನೋಡಿ ಅಂದ್ರು.. ಸರಿ ಅಂತ ನಾನು ಹಾರುವ ಇಂಡಿಯಾವನ್ನು ಹುಡುಕತೊಡಗಿದೆ.

ಇನ್ನೂ ಮೇಲೆ ನೋಡ್ತಾ ಇದೀನಿ. ನೀವು ನೋಡಿ ವೇವ್ ಕಾಣುತ್ತಾ ಅಂತ..

Leave a Reply

Your email address will not be published. Required fields are marked *