ಭಾರತ ಮತ್ತು ಅಮೇರಿಕ ನಡುವಿನ ಸಂಬಂಧ ಹದಗೆಡಲು ಕಾರಣವಾಗಿದ್ದ ಗುರುಪತ್ವಂತ್ ಸಿಂಗ್ ಪನ್ನು ಹತ್ಯಾ ಯತ್ನ ಈಗ ಇನ್ನೊಂದು ಆಯಾಮವನ್ನು ಪಡೆದುಕೊಂಡಿದೆ. ಈ ಹತ್ಯೆಯ ಯೋಜನೆಯನ್ನು ರೂಪಿಸಿದ ಎಂದುಆರೋಪಿಸಲಾದ ರಾ ಅಧಿಕಾರಿಯ ಹೆಸರು ಭಹಿರಂಗಗೊಂಡಿದೆ.
ಅಮೇರಿಕಾ ಮಾಧ್ಯಮಗಳಲ್ಲಿ ಈ ರಾ ಅಧಿಕಾರಿಯ ಹೆಸರು ಪ್ರಕಟವಾಗಿದೆ.

ವಾಇಷಿಂಗಟನ್ ಪೋಸ್ಟ್ ಪನ್ನು ಹತ್ಯೆಗಾಗಿ ಹಿಟ್ ಮ್ಯಾನ್ ವ್ಯವಸ್ಥೆ ಮಾಡಿದ ರಾ ಅಧಿಕಾರಿಯ ಹೆಸರು ವಿಕ್ರಮ್ ಯಾದವ್ ಎಂದು ಹೇಳಿದೆ. ಈ ವ್ಯಕ್ತಿ ರಾ ಅಧಿಕಾರಿಯಾಗಿದ್ದಾರೆ. ಖಾಲಿಸ್ಥಾನಿ ಉಗ್ರಗಾಮಿ ಪನ್ನು ಹತ್ಯೆಗಾಗಿ ಒಂದು ತಂಡದ ವ್ಯವಸ್ಥೆಯನ್ನು ಇವರೇ ಮಾಡಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ,
ವಿಕ್ರಮ್ ಯಾದವ್ ಯಾವುದೋ ಒಂದು ಕೆಲಸಕ್ಕೆ ಸೀಮಿತನಾಗಿಲ್ಲ. ಸರ್ಕಾರದ ಬೇರೆ ಬೇರೆ ಸಂಘಟನೆಯ ಜೊತೆ ಕೆಲಸ ಮಾಡುವ ವ್ಯಕ್ತಿ ಇವರು.
೨೦೨೩ ರ ನವೆಂಬರ್ ತಿಂಗಳಿನಲ್ಲಿ ಫೈನಾನ್ಸಿಯಲ್ ಟೈಂಸ್ ಪತ್ರಿಕೆಯಲ್ಲಿ ಪನ್ನು ಹತ್ಯಾ ಯೋಜನೆ ಕುರಿತು ವರದಿ ಪ್ರಕಟವಾಗಿತ್ತು. ಭಾರತದ ರಾ ಸಂಸ್ಥೆ ಈ ಹತ್ಯಾ ಯೋಜನೆಯನ್ನು ರೂಪಿಸಿತ್ತು. ಆದರೆ ಅಮೇರಿಕ ಈ ಹತ್ಯೆ ವಿಫಲವಾಗುವಂತೆ ನೋಡಿಕೊಂಡಿತು ಎಂದು ವರದಿ ತಿಳಿಸಿತ್ತು.
ಇದಾದ ಮೇಲೆ ಅಮೇರಿಕ ತನ್ನ ನೆಲದಲ್ಲಿ ತನ್ನ ಪ್ರಜೆಯನ್ನು ಹತ್ಯೆ ಮಾಡುವ ಯತ್ನವನ್ನು ಖಂಡಿಸಿ ಎಚ್ಚರಿಕೆ ನೀಡಿತ್ತು.
ಆದರೆ ಭಾರತ ಈ ಆರೋಪವನ್ನು ತಳ್ಲಿ ಹಾಕಿತ್ತು.

Leave a Reply

Your email address will not be published. Required fields are marked *