ರಾಜಧಾನಿ ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾವ ಹಿಂದಿನ ಚುನಾವಣೆಗಿಂತ ನೀರಸ. ಜನ ಮನೆಯಿಂದ ಹೊರಗೆ ಬರಲೇ ಇಲ್ಲ. ಕೆಲವರು ಊರು ಬಿಟ್ಟೇ ಹೋಗಿರಬೇಕು. ಹೀಗಾಗಿ ಬೆಂಗಳೂರಿನಲ್ಲಿ ಆದ ಮತದಾನದ ಪ್ರಮಾಣ ಪ್ರತಿಶ ೫೨ . ೮೧ ಇದು ಕಳೆದ ಚುನಾವಣೆಗಿಂತ ಕಡಿಮೆ

ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ ಸ್ವಲ್ಪ ಮಟ್ಟಿಗೆ ಬಿರುಸಿನ ಮತದಾನ ನಡಯಿತು, ಬಿಸಿಲಿನ ಝಳ ಏರುತ್ತಿದ್ದಂತೆಯೇ ಪ್ರಮಾಣ ಕ್ರಮೇಣ ಇಳಿಕೆಯಾಗಿತ್ತು. ಬಿಸಿಲು ಇಳಿಮುಖವಾಗುತ್ತಿದ್ದಂತೆ ಮತಗಟ್ಟೆಗಳಲ್ಲಿ ಸರತಿ ಸಾಲು ದೊಡ್ಡದಾಗಿ ಕಂಡು ಬಂದಿತ್ತು. ಆದರೆ ನಿರೀಕ್ಷಿತ ಪ್ರಮಾಣದ ಮತದಾನ ಆಗಲೇ ಇಲ್ಲ.
. ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು ಹಾಗೂ ಗಾಲಿ ಕುರ್ಚಿಯಲ್ಲಿ ಕುಳಿತು ಕೆಲ ಗಾಯಾಳುಗಳೂ ಕೂಡ ತಮ್ಮ ಮತ ಹಕ್ಕು ಚಲಾಯಿಸಿದರು.

ಆದರೆ ಸಮಾನ್ಯ ಜನರ ಪ್ರತಿಕ್ರಿಯೆ ನಿರಾಶಾದಾಯಕವಾಗಿತ್ತು. ಕನಿಷ್ಟ ಮತದಾನ ಮಾಡುವುದು ತಮ್ಮ ಕರ್ತವ್ಯ ಎಂಬ ಅರಿವು ಬಹಳಷ್ಟು ಜನರಿಗೆ ಇರಲಿಲ್ಲ. ಜೊತೆಗೆ ಒಂದು ರೀತಿಯ ನಿರಾಶೆ. ಯಾರು ಬಂದರೂ ಅಷ್ಟೇ ಎಂಬ ಭಾವನೆ. ಭ್ರಮನಿರಸನ..
ಈ ಕಡಿಮೆ ಪ್ರಮಾಣದ ಮತದಾನ ಯಾವ ರಾಜಕೀಯ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುವುದು ಕಷ್ಟ. ಆದರೆ ನಗರ ಪ್ರದೇಶದಲ್ಲಿ ಕಂಡು ಬಂದ ಈ ನಿರಾಸಕ್ತಿ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಗಂಟೆ..

Leave a Reply

Your email address will not be published. Required fields are marked *