ಬೆಂಗಳೂರು : ರಂಜಾನ್ ತಿಂಗಳು ವಿಶ್ವದಾದ್ಯಂತ ಮುಸ್ಲಿಂ ರಿಗೆ ಪವಿತ್ರ. ಇಡೀ ತಿಂಗಳು ಉಪವಾಸ. ಸೂರ್ಯ ಮುಳುಗಿದ ಮೇಲೆ ಆಹಾರ ಸೇವನೆ. ದಾನ ಧರ್ಮ ಈ ಹಬ್ಬದ ವಿಶೇಷ. ಹಬ್ಬದ ಮುಗಿಯುವುದು ಈದುಲ್ ಫಿತರ್ ಮೂಲಕ. ಇವತ್ತು ಬುಧವಾದ ಈದುಲ್ ಫಿತರ್. ನಾಡಿನಾದ್ಯಂತ ಹಬ್ಬದ ಸಂಭ್ರಮ.

ನಿನ್ನೆ ಕೇರಳದ ಪೂನ್ನಾಣಿಯಲ್ಲಿ ಚಂದ್ರನ ದರ್ಶನವಾಯಿತು. ಇಂದು ಕೇರಳ ರಾಜ್ಯ ಸೇರಿ ಕರಾವಳಿ ಭಾಗ ಮಂಗಳೂರು, ಕೊಡಗಿನಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಮುಸಲ್ಮಾನರು 29 ದಿನ ಉಪವಾಸ ನೆರವೇರಿಸಿ ಇಂದು ಉಪವಾಸ ಮುರಿಯಲಾಗುತ್ತದೆ. ಸೌದಿಯಲ್ಲಿ ಈ ಬಾರಿ 30 ದಿನ ಉಪವಾಸ ಆಚರಿಸಲಾಗಿದೆ.

ಮಂಗಳೂರಿನಲ್ಲಿ ಚಂದ್ರ ದರ್ಶನವಾಗಿದೆ. ಹೀಗಾಗಿ ಶಾಂತಿಯ ಪ್ರತೀಕವಾದ ಪವಿತ್ರ ಹಬ್ಬ ಈದುಲ್ ಫಿತರ್ ನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಮತ್ತು ಉಳ್ಳಾಲ ಖಾಝಿ ತ್ವಾಕ ಉಸ್ತಾದ್ ಮತ್ತು ಕೂರತ್ ತಂಙಳ್ ತಿಳಿಸಿದ್ದಾರೆ.

ಕೇರಳ, ತಮಿಳುನಾಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಬೆಳಗ್ಗೆಯೇ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಲಾಯಿತು.

ರಂಜಾನ್ ಹಬ್ಬದ ಬಗ್ಗೆ ರಾಜ್ಯಾದ್ಯಂತ ನಾಳೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯಿಸುವಂತೆ ರಂಜಾನ್ ಹಬ್ಬದ ರಜೆಯನ್ನು ಜಿಲ್ಲಾಧಿಕಾರಿಗಳು ಸ್ಥಳೀಯ ಪರಿಸ್ಥಿತಿಗನುಸಾರವಾಗಿ ನಾಳೆಯ ಬದಲಿಗೆ ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ.

Leave a Reply

Your email address will not be published. Required fields are marked *