ನವದೆಹಲಿ : ಅಬ್ಕಾರಿ ಹಗರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನಿನ್ನೆ ದೆಹಲಿ ಹೈಕೋರ್ಟ್ ನಲ್ಲಿ ಪರಿಹಾರ ಸಿಗಲಿಲ್ಲ. ತಮ್ಮ ಬಂಧನವನ್ನು ಪ್ರಶ್ನಿಸಿದ್ದ ಕೇಜ್ರಿವಾಲ್ ಐ ಡಿ ಕ್ರಮವನ್ನು ದುರುದ್ದೇಶಪೂರಿತ ಎಂದು ವಾದಿಸಿದ್ದರು.

ಆದರೆ ದೆಹಲಿ ಹೈಕೋರ್ಟ್ ಕೇಜ್ರಿವಾಲ್ ಅವರ ವಾದವನ್ನು ಪುರಸ್ಕರಿಸಲಿಲ್ಲ. ಜೊತೆಗೆ ಇ ಡಿ ಕ್ರಮವನ್ನು ಎತ್ತಿಹಿಡಿದಿತ್ತು.

ಅಬ್ಕಾರಿ ಹಗರಣದಲ್ಲಿ ಕೇಜ್ರಿವಾಲ್ ಅವರೇ ಕಿಂಗ್ ಪಿನ್ ಎಂದು ಇ ಡಿ ವಾದಿಸುತ್ತ ಬಂದಿದೆ. ಜೊತೆಗೆ ಅದು ನ್ಯಾಯಾಲಯದ ಮುಂದೆ ಸಲ್ಲಿಸಿರುವ ಕೆಲವು ದಾಖಲೆಗಳ ಬಗ್ಗೆಯೂ ನ್ಯಾಯಾಲಯ ಪೂರಕ ಪ್ರತಿಕ್ರಿಯೆ ನೀಡಿದೆ.

ಈ ತೀರ್ಪಿನ ನಂತರ ನ್ಯಾಯವನ್ನು ಕೋರಿ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಕೇಜ್ರಿವಾಲ್ ಅವರ ವಕೀಲರು ತಮ್ಮ ಕಕ್ಷಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ವಿಷಯವನ್ನು ದೃಢಪಡಿಸಿದ್ದಾರೆ.

Leave a Reply

Your email address will not be published. Required fields are marked *