ಜೆಡಿಎಸ್ ಎಂಬ ಮಾಜಿ ಜಾತ್ಯಾತೀತ ಪಕ್ಷ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆಯ ಸಮಸ್ಯೆ ಉಂಟಾಗಿದೆ. ಎಲ್ಲ ಸರಿಯಾಗಿ ಆಯಿತು ಎಂದುಕೊಳ್ಳುವಾಗಲೇ ಕೋಲಾರ ಕಗ್ಗಂಟು ಸಮಸ್ಯೆಯನ್ನು ಸೃಷ್ಟಿಸಿದೆ..

ಇತ್ತೀಚಿನ ವರದಿಯ ಪ್ರಕಾರ ಕೋಲಾರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಬಿಜೆಪಿ ಸಿದ್ಧವಿಲ್ಲ. ಜೆಡಿಎಸ್ ಗೆ ಕೋಲಾರ ಬೇಕೇ ಬೇಕು…ಕೋಲಾರದಲ್ಲಿ ಈಗ ಬಿಜೆಪಿ ಸಂಸತ್ ಸದಸ್ಯರಿದ್ದಾರೆ. ಜೊತೆಗೆ ಬಿಜೆಪಿಯ ಸ್ಥಳೀಯ ನಾಯಕರು ಈ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮಂಡ್ಯ ಮತ್ತು ಹಾಸನ ಕ್ಷೇತ್ರ ಮಾತ್ರ ನಿಮಗೆ ಸಾಕು ಎನ್ನುತ್ತಿದೆ ಬಿಜೆಪಿ. ಜೊತೆಗೆ ಡಾ. ಮಂಜುನಾಥ್ ಅವರಿಗೆ ಟಿಕೆಟ್ ನೀಡಿದ್ದೇವೆ. ಅವರೂ ನಿಮ್ಮವರೇ ಎಂಬುದು ಬಿಜೆಪಿ ವಾದ. ಇದರಿಂದ ಜೆಡಿಎಸ್ ನಾಯಕರಿಗೆ ಬೇಸರವಾಗಿದೆ ಎನ್ನುತ್ತದೆ ದೆಹಲಿ ವರದಿ.

ಈ ನಡುವೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸುಮಲತಾ ಅವರಿಗೆ ಬಿಜೆಪಿ ವರಿಷ್ಟು ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಪಕ್ಷದ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿದ ಮೇಲೆ ಸುಮಲತಾ ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ ಸುಮಲತಾ ಅವರಿಗೆ ಟಿಕೆಟ್ ನೀಡಿದರೆ ಮಾಜಿ ಸಚಿವ ಡಾ. ಸುಧಾಕರ್ ಬಂಡಾಯದ ಬಾವುಟ್ ಹಾರಿಸಬಹುದು..ಹಾಗೆ ಎಸ್.ಆರ್. ವಿಶ್ವನಾಥ್ ಅವರು ಏನು ಮಾಡುತ್ತಾರೆ ಎಂದು ಹೇಳಲಾಗದು..

Author

Leave a Reply

Your email address will not be published. Required fields are marked *