ನವದೆಹಲಿ : ಎಲಾನ್ ಮಸ್ಕ್ ಈ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಭಾರತದಲ್ಲಿ ಮರುಕಟ್ಟೆಯನ್ನು ಟೆಸ್ಲಾ ಪ್ರವೇಶಿಸುವ ವಿಚಾರದಲ್ಲಿ ಈ ಭೇಟಿ ಮಹತ್ವದ್ದಾಗಿದೆ. ಎಲೆಕ್ಟ್ರಿಲ್ ವೆಹಿಕಲ್ ಗಳ ಉತ್ಪಾದನೆಯಲ್ಲಿ ದೈತ್ಯ ಶಕ್ತಿ ಹೊಂದಿರುವ ಟೆಸ್ಲಾ ಭಾರತ ಪ್ರವೇಶಿಸುವುದರಿಂದ ಇಲ್ಲಿನ ಚಿತ್ರಣವೇ ಬದಲಾಗಬಹುದು.

ಕಳೆದ ಮಾರ್ಚ್ ನಲ್ಲಿ ಭಾರತ ಸರ್ಕಾರ ಇವಿ ಅಥವಾ ಎಲೆಕ್ಟ್ರ‍ಾನಿಕ್ ವಾಹನಗಳಿಗೆ ಸಂಬಂಧಿಸಿದಂತೆ ಹೊಸ ನೀತಿಯನ್ನು ಜಾರಿಗೆ ತಂದಿದೆ. ಇದು ಇವಿ ವಾಹನಗಳ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಾಧ್ಯತೆ ಇದೆ.

ಎಲಾನ್ ಮಸ್ಕ್ ಕೂಡ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಬಂಡವಾಳ ಹೂಡಲು ಆಸಕ್ತರಾಗಿದ್ದಾರೆ. ಹಾಗೆ ಭಾರತ ಇವಿ ಉತ್ಪಾದನಾ ಮಾರುಕಟ್ಟೆಯ ಹಬ್ ಆಗಿ ಪರಿವರ್ತಿಸುವ ಉದ್ದೇಶವೂ ಇದೆ.

ಈ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ನಾನು ಉತ್ಸುಕನಾಗಿದ್ದೇನೆ ಎಂದು ಎಕ್ಸ್ (ಟ್ವೀಟರ್​​) ನಲ್ಲಿ ಹೇಳಿದ್ದಾರೆ.

ಭಾರತದಲ್ಲಿ ಟೆಸ್ಲಾದ ಹೊಸ ಫಾಕ್ಟರಿ ಸ್ಥಾಪಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಪ್ರಧಾನಿಯವರ ಭೇಟಿಯ ಸಂದರ್ಭದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

Author

Leave a Reply

Your email address will not be published. Required fields are marked *