ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸರಿಯಲ್ಲ; ಅಮೇರಿಕ ಕಳವಳ

ವಾಷಿಂಗ್ಟನ್ : ಭಾರತದಲ್ಲಿ ಜಾತಿ ಮತ್ತು ಕೋಮು ಆಧಾರದ ಮೇಲೆ ಪೌರತ್ವ ನೀಡುವ ಕುರಿತು ಅಮೇರಿಕದಲ್ಲಿ ಕಳವಳ ವ್ಯಕ್ತವಾಗಿದೆ. ಭಾರತದ ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೇರಿಕದ ಅಂತಾರಾಷ್ಟ್ರ‍ೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತಾದ ಆಯೋಗ ಧರ್ಮ ಮತ್ತು ಕೋಮು ಆಧಾರದ ಮೇಲೆ ಪೌರತ್ವ ನೀಡುವುದಾಗಲೀ ನಿರಾಕರಿಸುವುದಾಗಲಿ ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಧರ್ಮ…

ನಾನು ರಾಜಕಾರಣಿಯಾಗಿ ವಿಫಲ; ಸಂಸದನಾಗಿ ಸಫಲ: ಪ್ರತಾಪ ಸಿಂಹ

ಬೆಂಗಳೂರು : ಮೈಸೂರಿನ ಸಂಸದ ಪ್ರತಾಪ ಸಿಂಹ ಅವರಿಗೆ ಈಗ ಆತ್ಮಾವಲೋಕನದ ಕಾಲ.. ಈಗ ಅವರು ಅದನ್ನೇ ಮಾಡುತ್ತಿದ್ದಾರೆ. ಅವರು ತಮಗೆ ಟಿಕೆಟ್ ತಪ್ಪುತ್ತಿದೆ ಎಂದುಕೊಂಡಿರಲಿಲ್ಲ. ಆದರೆ ತಪ್ಪಿ ಹೋಯಿತು. ಉಗ್ರ ಹಿಂದುತ್ವ ತಮ್ಮನ್ನು ಕೈ ಹಿಡಿಯುತ್ತದೆ ಎಂದು ನಂಬಿದ್ದ ಅವರು ಟಿಪ್ಪೂವಿನಿಂದ ಗುಂಭಜ್ ವರೆಗೆ ತಾವೇ ವಿವಾದವನ್ನು ಸೃಷ್ಟಿಸುತ್ತಿದ್ದರು. ತಾವೇ ಸೃಷ್ಟಿಸಿದ ವಿವಾದದ ರಾಜಕೀಯ…

ನೀವು ರಾಮನ ಪಾತ್ರ ಮಾಡಿದರೂ ಸರಿ, ಪ್ರಧಾನಿ ಮೋದಿ ಪಾತ್ರ ಮಾಡಿದರೂ ಸರಿ, ನಿಮಗೆ ಬಿಜೆಪಿ ಸೀಟು ಗ್ಯಾರಂಟಿ ! ಎರಡೂ ಮಾಡಿದರೆ ಡಬ್ಬಲ್ ಗ್ಯಾರಂಟಿ !!

ಬಿಜೆಪಿಗೂ ಚಿತ್ರ ನಟರಿಗೂ ಅವಿನಾಭಾವ ಸಂಬಂಧ. ಮೊದಲಿನಿಂದಲೂ ಬಿಜೆಪಿ ಚಿತ್ರ ನಟರಿಗೆ ಟಿಕೆಟ್ ನೀಡುತ್ತಲೇ ಬಂದಿದೆ..ಇದಕ್ಕೆ ಕಾರಣ ಏನು ? ನಟರು ರಾಜಕೀಯದಲ್ಲೂ ಚೆನ್ನಾಗಿ ನಟಿಸಬಹುದು ಎಂಬ ನಂಬಿಕೆ ಕಾರಣ ಇರಬಹುದೆ ? ಇದ್ದರೂ ಇರಬಹುದು. ಆದರೆ ಎಲ್ಲ ಚಿತ್ರ ನಟರೂ ರಾಜಕೀಯದಲ್ಲಿ ಚೆನ್ನಾಗಿ ನಟಿಸುತ್ತಾರೆ ಎಂದು ಹೆಳಲು ಸಾಧ್ಯವಿಲ್ಲ. ಕೆಲವು ಸಂದರ್ಭದಲ್ಲಿ ನಟರಿಗಿಂತ ರಾಜಕಾರಣಿಗಳೇ…

ಕ್ರಿಕೆಟ್ ದಣಿಗಳ ದುಡ್ಡಿನ ಅಹಂಕಾರ; ಇಸ್ಪೀಟ್ ಎಲೆಗಳಾದ ಆಟಗಾರರು; ಅಭಿಮಾನಿಗಳ ಬಡಿದಾಟ

ನವದೆಹಲಿ : ದೇಶದಲ್ಲೀಗ ಕ್ರಿಕೆಟ್ ಜ್ವರ. ಐ ಪಿಎಲ್ ಎಲ್ಲರ ಸಂಜೆಯನ್ನು ಆಕ್ರಮಿಸಿ ಕುಳಿತಿದೆ. ಸಂಜೆಯಾದರೆ ಸಾಕು ಕ್ರಿಕೆಟ್ ಅಭಿಮಾನಿಗಳು ಟಿವಿ ಮುಂದೆ ಪ್ರತಿಷ್ಟಾಪನೆ, ಇನ್ನು ಕ್ರಿಕೆಟ್ ಸ್ಟೇಡಿಯಂ ನಲ್ಲಿ ಅಭಿಮಾನಿಗಳ ಕಾರುಬಾರು. ಈ ಅಭಿಮಾನ ಮಿತಿ ಮೀರುತ್ತಿದೆ. ಎರಡು ದಿನಗಳ ಹಿಂದೆ ಅಹಮದಾಬಾದ್ ನಲ್ಲಿ ನಡೆದ ಗುಜರಾತ್ ಮತ್ತು ಮುಂಬೈ ನಡುವೆ ನಡೆದ ಪಂದ್ಯದುದ್ದಕ್ಕೂ…

ಮೋದಿ ಅವರ ಅಂಧ ಭಕ್ತರಿಗೆ ಕಪಾಳ ಮೋಕ್ಷ ಮಾಡಿ ಎಂದರೆ ಮಾಧ್ಯಮಗಳಿಗೇಕೆ ಕಡು ಕೋಪ ?

ಬೆಂಗಳೂರು : ಅವರು ಪ್ರಧಾನಿಯಾಗಿರಲಿ, ಮುಖ್ಯಮಂತ್ರಿಯಾಗಿರಲಿ ಬೇರೆ ರಾಜಕೀಯ ನಾಯಕರೇ ಆಗಿರಲಿ, ಸದಾ ಅವರಿಗೆ ಜಯಕಾರ ಹಾಕುವ ಅಭಿಮಾನಿಗಳ ಕೆನ್ನೆಗೆ ಬಾರಿಸಿ ಎಂದರೆ ಅದು ವಿವಾದಾತ್ಮಕ ಹೇಳಿಕೆನಾ ? ಇಂತಹ ಪ್ರಶ್ನೆ ಉದ್ಭವಿಸುವುದಕ್ಕೆ ಕಾರಣ ಸಚಿವರೊಬ್ಬರ ಹೇಳಿಕೆ. ಅವರು ಸಚಿವ ಶಿವರಾಜ್ ತಂಗಡಗಿ. ಕೊಪ್ಪಳದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಹೇಳಿದ್ದು ಭಾರತೀಯ ಜನತಾ ಪಕ್ಷದ…

ಜೆಡಿಎಸ್; ಇಂದು ಕೋರ್ ಕಮಿಟಿ ಸಭೆ, ಮಂಡ್ಯದಿಂದ ಯಾರು ? ಹಾಸನದಿಂದ ಪ್ರಜ್ವಲ್ ಗೆ ಟಿಕೆಟ್ ತಪ್ಪುತ್ತಾ ?

ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್ ಇಂದು ಪ್ರಕಟಿಸುವ ಸಾಧ್ಯತೆ ಇದೆ. ಇಂದು ಬೆಳಿಗ್ಗೆ ಕುಮಾರಸ್ವಾಮಿ ಅವರ ಜೆ ಪಿ ನಗರದ ಮನೆಯಲ್ಲಿ ಪಕ್ಷದ ಕೋರ್ ಕಮೀಟಿ ಸಭೆ ನಡೆಯಲಿದೆ. ಈ ಸಭೆಯ ನಂತರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು ಎಂಬುದು ಈಗಿನ ನಿರೀಕ್ಷೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಮೇಲೆ…

ಗಾಲಿ ಜನಾರ್ಧನ ರೆಡ್ಡಿ ಗಾಲಿ ಮತ್ತೆ ತಿರುಗಿಯೇ ಬಿಟ್ಟಿತಲ್ಲ…! ಬಿಜೆಪಿಯೆಡೆಗೆ…

ಬೆಂಗಳೂರು : ಬಳ್ಳಾರಿ ಗಣಿ ದಣಿ ಗಾಲಿ ಜನಾರ್ಧನ ರೆಡ್ಡಿ…ರಾಜ್ಯ ರಾಜಕಾರಣದಲ್ಲಿ ಹಲವು ಸ್ಥಿತ್ಯಂತರಗಳಿಗೆ ಕಾರಣರಾದವರು.. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜೈಲಿಗೂ ಹೋಗಿ ಬಂದವರು.. ಸಿದ್ದರಾಮಯ್ಯನವರ ಬಳ್ಳಾರಿ ನಡಿಗೆ ನಡೆದಿದ್ದು ಇವರ ವಿರುದ್ಧವೇ. ಆದರೆ ಕಾಲ ಅಂದರೆ ಹಾಗೆ.. ಇತ್ತೀಚಿಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿದವರು ರೆಡ್ಡಿ..ಸಿದ್ದರಾಮಯ್ಯ ಮತ್ತು ಡಿ.ಕೆ.…

ಸಮಾಜ ದೇವತೆಯ ಪದತಲದಲ್ಲಿ ಹೂವಾಗುವ ಸೌಭಾಗ್ಯ ನನ್ನದಾಗಿತ್ತುಅನಂತಕುಮಾರ್ ಹೆಗಡೆ ವಿದಾಯ…

ಟಿಕೆಟ್‌ ಕೈತಪ್ಪುತ್ತಿದ್ದಂತೆ ಹಾಲಿ ಸಂಸದ ಅನಂತ್‌ ಕುಮಾರ್ ಹೆಗಡೆ ಇಷ್ಟು ವರ್ಷ ತಮ್ಮ ಜೊತೆಗಿದ್ದ ಕಾರ್ಯಕರ್ತರು ಹಾಗೂ ಮತದಾರರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿಅನಂತ್‌ ಕುಮಾರ್ ಹೆಗಡೆ ಹಂಚಿಕೊಂಡಿದ್ದಾರೆ. ನನ್ನ ಜನಕ್ಕೆ ಸೇವೆಯ ಸೌಭಾಗ್ಯವನ್ನು ಒದಗಿಸಿಕೊಟ್ಟ ಕ್ಷೇತ್ರದ ಜನಮನಕ್ಕೆ ಹೃದಯದಾಳದ ಕೃತಜ್ಞತೆ ಎಂದು ತಿಳಿಸಿದ್ದಾರೆ. ” ಈ ಭೂಮಿಯಲ್ಲಿ ನನ್ನ ಲೌಕಿಕ…

ಕರ್ನಾಟಕಕ್ಕೆ ಯಾವುದೇ ಅನುದಾನ ತಡೆಹಿಡಿದಿಲ್ಲ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Niramala Sitharaman : ಜಿಎಸ್ ಟಿ ಪಾಲಿನಲ್ಲಿ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾದ ಬಗ್ಗೆ ಅವರು ಯಾವುದೇ ಪ್ರಸ್ತಾಪ ಮಾಡಿಲ್ಲ. ರಾಜ್ಯದ ಬರಗಾಲ ಪರಿಸ್ಥಿತಿಯ ಬಗ್ಗೆ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ಹೋಗಿದೆ.

ಬಿಜೆಪಿ ಧರ್ಮ ಕೇಂದ್ರಿತ ರಾಜಕಾರಣಕ್ಕೆ ಡಾ. ಮಂಜುನಾಥ್ ವಿರೋಧ !ಬಿಜೆಪಿಗೆ ಮುಜುಗರ…

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವವರು ಡಾ. ಮಂಜುನಾಥ್. ಈಗ ಅವರು ನೀಡಿದ ಹೇಳಿಕೆಯೊಂದು ಬಿಜೆಪಿ ಮೂಲ ನೀತಿಗೆ ವಿರುದ್ಧವಾಗಿದೆ. ಅವರು ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ಮಾತನಾಡಿದ್ದಾರೆ ನಿಜ. ಅದರೆ ಈ ಮಾತು ಬಿಜೆಪಿಯ ರಾಜಕಾರಣದ ಮೂಲ ಶಕ್ತಿಯನ್ನೇ ಅಲುಗಾಡಿಸುವಂತಿದೆ. ಹಾಗೆ ಬಿಜೆಪಿ ಸಿದ್ದಾಂತಕ್ಕೂ ವಿರೋಧವಾಗಿದೆ.. ಈ ಹೇಳಿಕೆಗೆ…