ಅಯೋಧ್ಯೆ : ಪ್ರಧಾನಿ ನರೇಂದ್ರ ಮೋದಿ ಅವರು ಈ ಸಂಜೆ ಬಂದಿದ್ದು ಅಯೋಧ್ಯೆಗೆ. ಇಲ್ಲಿ ಎರಡು ಕಾರ್ಯಕ್ರಮಗಳು. ಒಂದು ರಾಮ ದರ್ಶನ. ಇನ್ನೊಂದು ರೋಡ್ ಶೋ. ಇವೆರಡು ಕಾರ್ಯಕ್ರಮಗಳು ಬೇರೆ ಬೇರೆಯಾಗಿ ಕಂಡರೂ ಬೇರೆಯಲ್ಲ.

ಧರ್ಮ ಮತ್ತು ರಾಜಕೀಯ. ಇವರೆಡನ್ನು ಬೆಸೆದವರು ಬೆಸೆಯುವವರು ಇವರೇ. ಇದರಿಂದ ದೇವರಿಗೆ ರಾಜಕೀಯಕ್ಕೆ ಏನಾಗುತ್ತೋ ಗೊತ್ತಿಲ್ಲ. ಆದರೆ ಇವರಿಗೆ ಮಾತ್ರ ಲಾಭ. ಧರ್ಮ ರಾಜಕೀಯಕ್ಕೆ ತಂದು ಕೊಡುವ ಲಾಭ.

ಬಿಹಾರ ಮತ್ತು ಜಾರ್ಖಂಡ್ ಚುನಾವಣಾ ಪ್ರಚಾರವನ್ನು ಮುಗಿಸಿದ ಮೋದಿ ನಂತರ ಆಯೋಧ್ಯೆಗೆ ಬಂದಿಳಿದರು. ನಂತರ ರಾಮ ಮಂದಿರಕ್ಕೆ ಭೇಟಿ ನೀಡಿದರು. ದೇವರಿಗೆ ನಮಿಸಿದರು. ರಾಮ ದೇವರ ಪ್ರಾಣ ಪ್ರತಿಷ್ಟೆಯ ನಂತರ ಪ್ರಧಾನಿ ಮೋದಿ ಅಯೋಧ್ಯೆಗೆ ನೀಡುತ್ತಿರುವ ಮೊದಲ ಭೇಟಿ ಇದು. ಇದಾದ ಮೇಲೆ 2 ಕಿಮೀ ಉದ್ದದ ರೋಡ್ ಶೋ.

ಪ್ರಧಾನಿ ಜೊತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಪಾಲ್ಗೊಂಡಿದ್ದರು.

Author

Leave a Reply

Your email address will not be published. Required fields are marked *