Suddi Tv

Suddi Tv

ಯುವ, ಮಹಿಳಾ ಮತ್ತು ಹೊಸ ಮುಖಗಳಿಗೆ ಲೋಕಸಭಾ ಟಿಕೆಟ್ ಹಂಚಿಕೆ: ಡಿ.ಕೆ.ಶಿವಕುಮಾರ್

D K SHIVAKUMAR

ಬೆಂಗಳೂರು: “ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲೇ ಅತಿ ಹೆಚ್ಚು ಯುವ, ಮಹಿಳಾ, ವಿದ್ಯಾವಂತ, ಪ್ರಜ್ಞಾವಂತರಿಗೆ, ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಇವರೆಲ್ಲಾ ಈ ಬಾರಿ ಗೆದ್ದು ಭವಿಷ್ಯದಲ್ಲಿ ಪಕ್ಷದ ದೊಡ್ಡ ನಾಯಕರಾಗಿ ಬೆಳೆಯುತ್ತಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ಕೇವಲ ಸಚಿವರ…

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಅಯೋಮಯ: ಬಸವರಾಜ ಬೊಮ್ಮಾಯಿ

ಹಾವೇರಿ: ಬಿಜೆಪಿ ಅವಧಿಯಲ್ಲಿಯೇ ಕರ್ನಾಟಕ ಆರ್ಥಿಕವಾಗಿ ಸದೃಡ ಆಗಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕರ್ನಾಟಕದ ಆರ್ಥಿಕ ಸ್ಥಿತಿ ಅಯೋಮಯ ಆಗಿದೆ. ಖಜಾನೆಯೂ ಖಾಲಿಯಾಗಿದೆ. ಬರಗಾಲದಲ್ಲಿಯೂ ಸಹ ಇವರು ಹಣ ಬಿಡುಗಡೆ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಣೆಬೆನ್ನೂರು ತಾಲೂಕು ಮಾಕನೂರ್ ಬಳಿ ಚುನಾವಣಾ ಪ್ರಚಾರ ಸಭೆ ನಡೆಸಿದ…

RC16: ಸೆಟ್ಟೇರಿತು ರಾಮ್ ಚರಣ್ 16ನೇ ಸಿನಿಮಾ.. ಚೆರ್ರಿ ಜೊತೆ ಶ್ರೀದೇವಿ ಪುತ್ರಿ ಹಂಗಾಮ

ತ್ರಿಬಲ್ ಆರ್ ಸಿನಿಮಾದ ಯಶಸ್ಸಿನ ಬಳಿಕ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಚೆರ್ರಿ ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿರುವ ರಾಮ್ ಚರಣ್ ಬುಚ್ಚಿ ಬಾಬು ಜೊತೆ ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ RC 16 ಎಂದು ಟೈಟಲ್ ಇಡಲಾಗಿದೆ. ಈ ಹೊಸ ಸಿನಿಮಾದ…

ಯಾವುದೇ ಕಾರಣಕ್ಕೆ ಕಾಂಗ್ರೆಸ್ ಸೇರುವುದಿಲ್ಲ : ಡಿ ವಿ ಸದಾನಂದ ಗೌಡ ಸ್ಪಷ್ಟನೆ

ಬೆಂಗಳೂರು; ಬೆಂಗಳೂರು ಉತ್ತರ ಟಿಕೆಟ್‌ ಕೈತಪ್ಪಿದ್ದರಿಂದ ನನಗೆ ನೋವಾಗಿರುವುದು ನಿಜ. ಆದರೆ ನಾನು ಯಾವುದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ  ಸಂಸದ ಡಿವಿ ಸದಾನಂದ ಗೌಡ ಸ್ಪಷ್ಟಪಡಿಸಿದರು. ಸಂಜಯ ನಗರ ನಿವಾಸದಲ್ಲಿ ಇಂದು ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದರು. ಅಲ್ಲದೆ ನಾನು ಪಕ್ಷ ಶುದ್ದೀಕರಣ ಮಾಡುವತ್ತ ಗಮನ ಹರಿಸುತ್ತೇನೆ.…

‘ಇಂಡಿಯಾ’ ಗೆದ್ದರೆ ಮೇಕೆದಾಟು ಯೋಜನೆ ತಡೆಯುತ್ತೇವೆ ಎಂದಿರುವ ಡಿಎಂಕೆ ನಡೆ ಖಂಡನಾರ್ಹ: ಮುಖ್ಯಮಂತ್ರಿ ಚಂದ್ರು

ಬೆಂಗಳೂರು: ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ತಡೆಯೊಡ್ಡುವುದಾಗಿ ಹೇಳಿರುವುದು ಬೇಸರದ ಸಂಗತಿ. ಸಿಎಂ ಎಂ.ಕೆ. ಸ್ಟಾಲಿನ್‌ ಅವರ ನಡೆ ಖಂಡನಾರ್ಹ ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು. ಲೋಕಸಭೆ ಚುನಾವಣೆ ಹಿನ್ನೆಲೆ ಎಂ.ಕೆ. ಸ್ಟಾಲಿನ್‌ ನೇತೃತ್ವದ ಡಿಎಂಕೆ ಬಿಡುಗಡೆ ಮಾಡಿರುವ ಪ್ರಣಾಳಿಕೆ ವಿಚಾರವಾಗಿ…

ಚುನಾವಣಾ ದೇಣಿಗೆ: ನಮ್ಮದು ಹಪ್ತಾ ವಸೂಲಿಯಾದರೆ ಕಾಂಗ್ರೆಸ್ ಗೆ ಬಂದಿದ್ದು ಏನು ? ಅಮಿತ್ ಷಾ ಪ್ರಶ್ನೆ’

ನವದೆಹಲಿ : ಚುನಾವಣಾ ಬಾಂಡ್ ಗಳನ್ನು ‘ಹಫ್ತಾ ವಸೂಲಿ’ ಎಂದು ಕರೆಯುತ್ತಿರುವ ರಾಹುಲ್ ಗಾಂಧಿ 1,600 ಕೋಟಿ ರೂ.ಗಳನ್ನು ಎಲ್ಲಿಂದ ಪಡೆದರು ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ. ಇದು ಕೇಂದ್ರ ಗೃಹ ಸಚಿವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹಾಕಿದ ಸವಾಲು.ಆದರೆ ಬಿಜೆಪಿಗೆ ಬಂದಿರುವ 12 ಸಾವಿರ ಕೋಟಿಗೂ ಹೆಚ್ಚು ಹಣದ ಬಗ್ಗೆ ಯಾವುದೇ ವಿವರ ನೀಡಿಲ್ಲ.ಜೊತೆಗೆ…

ಸಂಪಾದಕೀಯ : ಕೇಸರಿ ಕುಂಡದಲ್ಲಿ ದಹಿಸಿದ ಸಮಾಜವಾದ; ಈ ಬಾರಿ ಗೆಲ್ಲುತ್ತಾರಾ ಗೀತಾ ಶಿವರಾಜಕುಮಾರ್

ಶಿವಮೊಗ್ಗ..ಒಂದು ಕಾಲದಲ್ಲಿ ಸಮಾಜವಾದದ ನೆಲ.. ಕಾಗೋಡು ಸತ್ಯಾಗ್ರಹದ ಭೂಮಿ..ಶಾಂತವೇರಿ ಗೋಪಾಲ ಗೌಡ, ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ, ಜೆ.ಎಚ್. ಪಟೇಲ್ ಹೀಗೆ ಸಮಾಜವಾದ ಬೆಳೆ ಬಿತ್ತಿದವರು ಹಲವರು.. ರಾಷ್ಟ್ರ ಕವಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ ಮಾನವೀಯ ಮನಸ್ಸುಗಳನ್ನು ಅರಳಿಸಿದವರು. ಇಂತಹ ಶಿವಮೊಗ್ಗ 90 ರ ದಶಕದಲ್ಲಿ ಬದಲಾಗತೊಡಗಿತು. ಸಮಾಜವಾದ ಚಳವಳಿ…

ಸುಳ್ಳು ಜಾಹೀರಾತು ; ಸುಪ್ರೀಂ ಕೋರ್ಟ್ ಕ್ಷಮೆಯಾಚಿಸಿದ ಬಾಬಾ ರಾಮದೇವ್ !

ನವದೆಹಲಿ : ಸುಳ್ಳು ಜಾಹೀರಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ (Supreme Court) ಕೆಂಗಣ್ಣಿಗೆ ಗುರಿಯಾಗಿದ್ದ ಬಾಬಾ ರಾಮದೇವ್ (Ramdev) ಮತ್ತು ಆಚಾರ್ಯ ಬಾಲಕೃಷ್ಣ (Acharya Balkrishna) ನ್ಯಾಯಾಲಯದ ಕ್ಷಮೆಯಾಚಿಸಿದ್ದಾರೆ. ಇನ್ನು ಮುಂದೆ ಸುಳ್ಳು ಜಾಹೀರಾತು ನೀಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಆಫಿಡೆವಿಟ್ ಸಲ್ಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ರಾಮದೇವ್ ಅವರು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದರು. ನ್ಯಾಯಾಲಯದ ಮುಂದೆ…

ಕೆನರಾ ಕಗ್ಗಂಟು; ಕಾಗೇರಿಯೋ, ಸೂಲಿಬೆಲೆಯೋ ? ಅಥವಾ ಶಶಿಭೂಷಣ ಹೆಗಡೆಯೋ ?

ಬೆಂಗಳೂರು: ಫೈರ್ ಬ್ರಾಂಡ್, ಕೋಮು ರಾಜಕಾರಣದ ರೂವಾರಿ ಅನಂತಕುಮಾರ್ ಹೆಗಡೆ. ಅವರಿಗೆ ಬಿಜೆಪಿ ಟಿಕೆಟ್ ತಪ್ಪುವುದು ಬಹುಮಟ್ಟಿಗೆ ನಿಶ್ಚಿತ.. ಆದರೆ ಟಿಕೆಟ್ ನೀಡುವುದು ಯಾರಿಗೆ ? ಇದು ಬಿಜೆಪಿ ಹೈಕಮಾಂಡ್ ಮುಂದಿರುವ ಪ್ರಶ್ನೆ. ಅನಂತಕುಮಾರ್ ಹೆಗಡೆ ಕೋಮು ರಾಜಕಾರಣ ಮಾಡುತ್ತ ಬಂದವರು. ಮುಸ್ಲೀಂ ವಿರೋಧವೇ ಅವರ ಆಸ್ತಿ. ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಭಾವನೆಯ ಜೊತೆ…

ನಗರ್ತಪೇಟೆಯಲ್ಲಿ ಧ್ವೇಷ ಭಾಷಣ; ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ನಗರ್ತಪೇಟೆಯಲ್ಲಿರುವ ಮೊಬೈಲ್ ಅಂಗಡಿ‌ ಘಟನೆ ಖಂಡಿಸಿ ಬಿಜೆಪಿ ನಡೆಸಿದ ಪ್ರತಿಭಟನೆ ವೇಳೆ ದ್ವೇಷ ಭಾಷಣ ಮಾಡಿದ ಆರೋಪ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಮೊಬೈಲ್ ಅಂಗಡಿ ಗಲಾಟೆಗೆ ಸಂಬಂಧಿಸಿದಂತೆ ಕಳೆದ…

error: