ಬೆಂಗಳೂರು: ಫೈರ್ ಬ್ರಾಂಡ್, ಕೋಮು ರಾಜಕಾರಣದ ರೂವಾರಿ ಅನಂತಕುಮಾರ್ ಹೆಗಡೆ. ಅವರಿಗೆ ಬಿಜೆಪಿ ಟಿಕೆಟ್ ತಪ್ಪುವುದು ಬಹುಮಟ್ಟಿಗೆ ನಿಶ್ಚಿತ.. ಆದರೆ ಟಿಕೆಟ್ ನೀಡುವುದು ಯಾರಿಗೆ ? ಇದು ಬಿಜೆಪಿ ಹೈಕಮಾಂಡ್ ಮುಂದಿರುವ ಪ್ರಶ್ನೆ.

ಅನಂತಕುಮಾರ್ ಹೆಗಡೆ ಕೋಮು ರಾಜಕಾರಣ ಮಾಡುತ್ತ ಬಂದವರು. ಮುಸ್ಲೀಂ ವಿರೋಧವೇ ಅವರ ಆಸ್ತಿ. ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಭಾವನೆಯ ಜೊತೆ ಆಟ ಆಡುತ್ತ ಬಂದವರು ಅವರು. ಈ ಬಾರಿ ಬಿಜೆಪಿ ವರಿಷ್ಟರಿಗೆ ಸಾಕಪ್ಪ ಈ ಹೆಗಡೆ ಸಹವಾಸ ಅನ್ನಿಸಿದೆ. ಜೊತೆಗೆ ಸಂವಿಧಾನ ಬದಲಿಸುವ ಮಾತನಾಡಿ ಅವರು ವಿವಾದ ಸೃಷ್ಟಿಸಿದ್ದಾರೆ, ಇದು ಬಿಜೆಪಿಗೆ ನುಂಗಲಾರದ ತುಪ್ಪ. ಸಂವಿಧಾನ ಬದಲಿಸುವುದಿದ್ದರೆ ಹೇಳಿ ಮಾಡಬಾರದು ಎಂಬುದು ಅವರ ನಿಲುಮೆ. ಆದರೆ ಹೆಗಡೆ ಅವರ ಬಾಯಿ ಸರಿಯಿಲ್ಲ.

ಹೀಗಾಗಿ ಬಿಜೆಪಿ ಕೆನರಾ ಕ್ಷೇತ್ರದಿಂದ ಮೂರು ಹೆಸರುಗಳ ಪರಿಶೀಲನೆ ನಡೆಸುತ್ತಿದೆ. ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಚಕ್ರವರ್ತಿ ಸೂಲಿ ಬೆಲೆ ಮತ್ತು ರಾಮಕೃಷ್ಣ ಹೆಗಡೆ ಕುಟುಂಬದ ಶಶಿಭೂಷಣ ಹೆಗಡೆ, ಹೆಸರುಗಳು ಮುಂಚೂಣಿಯಲ್ಲಿದೆ. ಕಾಗೇರಿಗೆ ಟಿಕೆಟ್ ನೀಡಲು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

Author

Leave a Reply

Your email address will not be published. Required fields are marked *