ಬೆಂಗಳೂರು : ಅವರು ಪ್ರಧಾನಿಯಾಗಿರಲಿ, ಮುಖ್ಯಮಂತ್ರಿಯಾಗಿರಲಿ ಬೇರೆ ರಾಜಕೀಯ ನಾಯಕರೇ ಆಗಿರಲಿ, ಸದಾ ಅವರಿಗೆ ಜಯಕಾರ ಹಾಕುವ ಅಭಿಮಾನಿಗಳ ಕೆನ್ನೆಗೆ ಬಾರಿಸಿ ಎಂದರೆ ಅದು ವಿವಾದಾತ್ಮಕ ಹೇಳಿಕೆನಾ ? ಇಂತಹ ಪ್ರಶ್ನೆ ಉದ್ಭವಿಸುವುದಕ್ಕೆ ಕಾರಣ ಸಚಿವರೊಬ್ಬರ ಹೇಳಿಕೆ. ಅವರು ಸಚಿವ ಶಿವರಾಜ್ ತಂಗಡಗಿ.

ಕೊಪ್ಪಳದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಹೇಳಿದ್ದು ಭಾರತೀಯ ಜನತಾ ಪಕ್ಷದ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿತ್ತು. ಈ ಭರವಸೆಯನ್ನು ಈಡೇರಿಸಿದ್ದರೆ ಹತ್ತು ವರ್ಷಗಳಲ್ಲಿ 20 ಕೋಟಿ ಉದ್ಯೋಗ ನೀಡಬೇಕಾಗಿತ್ತು. ಆದರೆ ನೀಡಲಿಲ್ಲ. ಆದರೂ ಮೋದಿ ಮೋದಿ ಎಂದು ಘೋಷಣೆ ಕೂಗುವವರಿಗೆ ಕಪಾಳ ಮೋಕ್ಷ ಮಾಡಬೇಕು. ಈ ಹೇಳಿಕೆ ಹೇಗೆ ವಿವಾದಾತ್ಮಮ ಹೇಳಿಕೆ ಹೇಗಾಗುತ್ತದೆ ? ಇದನ್ನು ವಿವಾದಾತ್ಮಕ ಮಾಡಿದ್ದು ಮಾಧ್ಯಮಗಳಲ್ಲವೆ ?.

ಸಚಿವ ತಂಗಡಗಿ ಅವರು ಪ್ರಧಾನಿ ಮೋದಿ ಅವರಿಗೆ ಅವಮಾನ ಮಾಡಿಲ್ಲ. ಅವರನ್ನು ನಿಂದಿಸಿಲ್ಲ ಅವರ ಕಪಾಳ ಮೋಕ್ಷ ಮಾಡಲು ಕರೆ ನೀಡಿದ್ದು ಅಂಧ ಭಕ್ತರಿಗೆ. ಮೋದಿ ಅವರಿಗೂ ಅವರ ಅಂಧ ಭಕ್ತರಿಗೂ ವ್ಯತ್ಯಾಸ ಇಲ್ಲವೆ ? ಮೋದಿ ಮತ್ತು ಅವರ ಅಂಧ ಭಕ್ತರು ಒಂದೇನಾ ? ಈ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಮಾಧ್ಯಮ ಈ ಕೆಲಸ ಮಾಡಬೇಕು. ಆದರೆ ಮಾಧ್ಯಮಗಳೂ ಈ ಹೇಳಿಕೆಯನ್ನು ವಿವಾದಾತ್ಮಕ ಎಂದು ಕರೆಯುತ್ತಿವೆ. ಅದರಂತೆ ಬಿಜೆಪಿಯ ಹಲವು ನಾಯಕರ ಪ್ರತಿಕ್ರಿಯ ಪಡೆದು ತುಂಗಡಿಯವರಿಗೆ ಬೈಸುತ್ತಿವೆ.

Author

Leave a Reply

Your email address will not be published. Required fields are marked *