ಪುಣೆ : ಒಕ್ಕಲಿಗರ ಮತ ಕಳೆದುಕೊಳ್ಳುವ ಭಯದಿಂದ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮೊದಲ ಹಂತದ ಚುನಾವಣೆ ಮುಗಿಯುವವರೆಗೆ ಲೈಂಗಿಕ ದೌರ್ಜನ್ಯದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರ ಮೇಲೆ ಕ್ರಮ ಕೈಗೊಳ್ಳಲೇ ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಚುನಾವಣ ಸಂದರ್ಭದಲ್ಲಿ ಅವರು ಈ ಆರೋಪ ಮಾಡಿದರು.

ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷದ ಹಿಂದೆಯೆ ಈ ಲೈಂಗಿಕ ಹಗರಣದ ಎಲ್ಲ ವಿವರಗಳು ತಿಳಿದಿದ್ದವು. ಆದರೂ ಕ್ರಮ ಕೈಗೊಳ್ಳಲಿಲ್ಲ. ಪೆನ್ ಡ್ರೈವ್ ಬಹಿರಂಗವಾದ ತಕ್ಷಣ ಕ್ರಮ ಕೈಗೊಳ್ಳದೇ ಸುಮ್ಮನೆ ಉಳಿಯಿತು. ಇದಕ್ಕೆ ಕಾರಣ ಒಕ್ಕಲಿಗರ ಮತವನ್ನು ಕಳೆದುಕೊಳ್ಳುವ ಭಯ ಎಂದು ಅವರು ಟೀಕಿಸಿದರು.

Author

Leave a Reply

Your email address will not be published. Required fields are marked *