ಅಬ್ಬಬ್ಬಾ.. ಚಂದ್ರನ ಮೇಲಿನ ಹೊಸ ಫೋಟೋ…ವಿಕ್ರಮ್ ಲ್ಯಾಂಡರ್ ಕಳುಹಿಸಿಯೇ ಬಿಟ್ಟ…!

Chandrayaan 3 Vikram Lander : ಭಾರತದ ಚಂದ್ರಯಾನ ವೈಜ್ಞಾನಿಕ ಕ್ರಾಂತಿಯ ಮಹತ್ವದ ಮೈಲುಗಲ್ಲು. ಈಗ ಚಂದ್ರನ ಮೇಲ್ಮೈನ ಉಸಿರು ಬಿಗಿ ಹಿಡಿಯುವ ಫೋಟೋ ಭೂಮಿಯನು ತಲುಪಿದೆ

ನವದೆಹಲಿ : ಭಾರತದ ಚಂದ್ರಯಾನ. ಅದು ನಮ್ಮ ವೈಜ್ಞಾನಿಕ ಕ್ರಾಂತಿಯ ಮಹತ್ವದ ಮೈಲುಗಲ್ಲು. ಅದ್ಬುತ ಸಾಧನೆ. ಈಗ ಚಂದ್ರನ ಮೇಲ್ಮೈನ ಉಸಿರು ಬಿಗಿ ಹಿಡಿಯುವ ಫೋಟೋ ಭೂಮಿಯನು ತಲುಪಿದೆ.
ಅಬ್ಬಾ…ನಿಜವಾಗಿ ಉಸಿರು ಬಿಗಿ ಹಿಡಿಯುವ ಚಿತ್ರಗಳು…

ಇಸ್ರೋ ಚಂದ್ರನತ್ತ ಕಲೂಹಿಸಿಕೊಟ್ಟ ಪ್ರಗ್ಯಾನ್ ರೋವರ್ ಗೊತ್ತಲ್ಲ. ? ಅದು ತನಗೆ ಕೊಟ್ಟ ಕೆಲಸವನ್ನು ಮುಗಿಸಿ ಚಂದ್ರನ ಮೇಲೆ ವಿಶ್ರಾಂತಿ ಪಡೆಯುತ್ತಿದೆ. ಒಂದು ಅರ್ಥದಲ್ಲಿ ನಿದ್ರೆ ಮಾಡುತ್ತಿದೆ, ಇದರ ಫೋಟೋ ತೆಗೆದಿದ್ದು ವಿಕ್ರಮ್ ಲ್ಯಾಂಡರ್.

ಈ ಫೋಟೋದಲ್ಲಿ ಇದುವರೆಗೆ ಇಲ್ಲದ ಸೂಕ್ಷ್ಮತೆ ಇದೆ. ಹೆಚ್ಚಿನ ವಿವರಗಳಿವೆ. ಈ ಫೋಟೋ ತೆಗೆದಿದ್ದು ಮಾರ್ಚ್ 15 ರಂದು. ಇದು ಕಡಿಮೆ ಎಲ್ಟೀತ್ಯೂಡ್ ನಲ್ಲಿ ತೆಗೆದ ಫೋಟೋ ಅನ್ನುವುದೇ ವಿಶೇಷ. ಹೀಗಾಗಿ ಇದರ ರೆಸ್ಯುಲ್ಯೂಷನ್ ಅತ್ಯದ್ಬುತ.

ಭಾರತದ ಚಂದ್ರಯಾನ ಯೋಜನೆಯಂತೆ ಕಳೆದ ವರ್ಶ ಅಂದರೆ 2023 ರ ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯಲಾಗಿತ್ತು. ಆಗ ಅಲ್ಲಿಂದ ಮೊದಲ್ ಫೋಟೋವನ್ನು ರವಾನಿಸಲಾಗಿತ್ತು.

ಈಗ ಬಂದಿರುವ ಹೊಸ ಫೋಟೋಗಳನ್ನ 65 ಕಿಮೀ ಎತ್ತರದಿಂದ ತೆಗೆಯಲಾಗಿದೆ. ಇದರ ರೆಸ್ಯಲ್ಯೂಶನ್ ೧೭ ಸೆಂಟೀಮೀಟರ್ ಪ್ರತಿ ಫಿಕ್ಸಲ್ ಗೆ ಇದೆ. ಮೊದಲು ಕಳುಹಿಸಿದ ಫೋಟೋಗಳನ್ನು 100 ಕಿಮೀ ಎತ್ತ್ರದಿಂದ ತೆಗೆಯಲಾಗಿತ್ತು. ಅದರ ರೆಸ್ಯುಲೇಷನ್ ಪ್ರತಿ ಫಿಕ್ಸಲ್ ಗೆ 26 ಸೆಂಟಿಮೀಟರ್ ಇತ್ತು.

Author

error: