ನವದೆಹಲಿ : ನೆರೆಯ ದೇಶ ಪಾಕಿಸ್ತಾನ ರಾಜಕುಮಾರನನ್ನು{ ಶೇಹಜಾದೆ } ಭಾರತದ ಪ್ರಧಾನಿಯನ್ನಾಗಿ ಮಾಡಲೇಬೇಕು ಎಂದು ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಪಾಕಿಸ್ತಾನದ ಫಾಲೋವರ್ ಎಂದು ಅವರು ದೂರಿದ್ದಾರೆ. ಇದುವರೆಗಿನ ಚುನಾವಣಾ ಪ್ರಚಾರದಲ್ಲಿ ಪಾಕಿಸ್ತಾನವನ್ನು ಹೆಚ್ಚು ಬಾರಿ ಪ್ರಧಾನಿ ಎಳೆದು ತಂದಿರಲಿಲ್ಲ. ಈಗ ಭಾರತದ ಚುನಾವಣಾ ಪ್ರಚಾರದಲ್ಲಿ ಪಾಕಿಸ್ತಾನದ ಬಳಕೆ ಪ್ರಾರಂಭವಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷ ಸಾಯುತ್ತಿದೆ. ಅಲ್ಲಿ ಪಾಕಿಸ್ತಾನ ಅಳುತ್ತಿದೆ ಎಂದು ನರೇಂದ್ರ ಮೋದಿ ಹೇಳಿದರು.

ಗುಜರಾತ್ ನ ಆನಂದ್ ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ 2047 ರ ಹೊತ್ತಿಗೆ ಪ್ರಬಲ ರಾಷ್ಟ್ರವಾಗಿ ರೂಪಗೊಳ್ಳುವ ಭರವಸೆಯನ್ನು ನೀಡಿದರು.

ಕಾಂಗ್ರೆಸ್ ಪಕ್ಷ 60 ವರ್ಷ ಈ ದೇಶದ ಆಳ್ವಿಕೆಯನ್ನು ನಡೆಸಿದೆ. 10 ವರ್ಷ ಬಿಜೆಪಿಯ ಸೇವಾಕಾಲ . ಈ ಅವಧಿಯನ್ನು ಸಾಕಷ್ಟು ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಶ ಸಂವಿಧಾನವನ್ನು ಬದಲಿಸಿ ದಲಿತರು ಮತ್ತು ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸ್ಲೀಂರಿಗೆ ನೀಡಲು ಹೊರಟಿತ್ತು ಎಂಬ ಆರೋಪವನ್ನು ಅವರು ಮಾಡಿದರು.

Author

Leave a Reply

Your email address will not be published. Required fields are marked *