ನಮ್ಮ ದೇಹ ಮಾತನಾಡುತ್ತದೆ ಎಲ್ಲಿ ವ್ಯತ್ಯಾಸವಾಗಿದೆ ಎಂದು ಹೇಳುತ್ತದೆ. ಮೌನವಾಗಿ ಕೇಳಿಸಿಕೊಳ್ಳಿ ನಿಮ್ಮ ರೋಗ ತನ್ನಿಂದ ತಾನೇ ಮಾಯವಾಗುತ್ತದೆ.
ಇವತ್ತಿನ ದಿನ ಯಾವುದೇ ಊರಿಗೆ, ಪಟ್ಟಣಕ್ಕೆ ಬನ್ನಿ. ಒಂದು ರೌಂಡ್ ಹಾಕಿ. ನಿಮಗೆ ಅತಿ ಹೆಚ್ಚು ಕಾಣುವುದು ಏನು ಗೊತ್ತಾ ಔಷಧದ ಅಂಗಡಿಗಳು. ದಿನದಿಂದ ದಿನಕ್ಕೆ ಡಾಕ್ಟರ್ ಗಳ ಸಂಖ್ಯೆ, ಔಷಧದ ಅಂಗಡಿಗಳ ಸಂಖ್ಯೆ ಹೆಚ್ಚುತ್ತಲೆ ಇದೆ. ಔಷಧದ ಅಂಗಡಿಗಳ ಮುಂದೆ ಸದಾ ಜನಜಂಗುಳಿ ಯಾಕೆ ಹೀಗೆ ? ಇತ್ತೀಚಿನ ವರ್ಷಗಳಲ್ಲಿ ರೋಗ ಹೆಚ್ಚಾಗಿದೆಯಾ ? ರೋಗಿಗಳು ಹೆಚ್ಚಾಗಿದ್ದಾರಾ ? ಅಥವಾ ಜನ ಅನಗತ್ಯವಾಗಿ ವೈದ್ಯರನ್ನು ನೋಡಿ ಔಷಧ ತೆಗೆದುಕೊಳ್ಳುವುದು ಚಟವಾಗಿದೆಯಾ ?
ಏನೇ ಇರಬಹುದು ಬಿಡಿ. ಆದರೆ ನಿಮಗೆ ಗೊತ್ತಾ ಮನುಷ್ಯನ ದೇಹವೇ ಒಂದು ಸೂಪರ್ ಕಂಪ್ಯೂಟರ್. ಈ ಸಿಸ್ಟಮ್ ಹೇಗಿದೆ ಎಂದರೆ ಇದು ತನ್ನನ್ನು ತಾನೇ ಗುಣಪಡಿಸಿಕೊಳ್ಳಬಹುದು. ಅಂತಹ ವ್ಯವಸ್ಥೆ ನಮ್ಮ ದೇಹದಲ್ಲಿದೆ. ನಮ್ಮ ದೇಹ ಮಾತನಾಡುತ್ತದೆ. ನಮಗೆ ಆ ಮಾತನ್ನು ಕೇಳಿಸಿಕೊಳ್ಳುವುದು ಗೊತ್ತಿರಬೇಕು. ದೇಹದ ಮಾತು ಕೇಳುವಾಗ ನಮ್ಮ ಮನಸ್ಸು ಮೌನವಾಗಿರಬೇಕು..
ಸದಾ ವಟ ವಟ್ ಎಂದು ಶಬ್ದ ಮಾಡುವ ಮನಸ್ಸು ಸುಮ್ಮನಾದಾಗ ಮಾತ್ರ ದೇಹದ ಮಾತು ಕೇಳಲು ಪ್ರಾರಂಭವಾಗುತ್ತದೆ. ದೇಹದ ಮಾತನ್ನು ಕೇಳಿಸಿಕೊಂಡ ಮೇಲೆ ಅದಕ್ಕೆ ನೀವು ಸೂಚನೆ ನೀಡಬಹುದು. ಯಾಕೆಂದರೆ ಅದು ನಿಮ್ಮ ದೇಹ. ನೀವು ಅಂದರೆ ನಿಮ್ಮ ಮನಸ್ಸು ದೇಹಕ್ಕೆ ಸೂಚನೆ ಕೊಟ್ಟರೆ ದೇಹ ಸುಮ್ಮನೆ ಪಾಲಿಸುತ್ತದೆ. ದೇಹದ ಯಾವ ಭಾಗ ಕೆಟ್ಟೀದೆಯೋ ಅದನ್ನು ಸರಿಪಡಿಸುತ್ತದೆ.
ಈ ಪ್ರಯೋಗವನ್ನು ನೀವು ಮಾಡಬಹುದು. ದೇಹದ ಮಾತನ್ನು ಕೇಳಿಸಿಕೊಳ್ಳಿವುದು ಮತ್ತು ಅದಕ್ಕೆ ಪ್ರತಿಯಾಗಿ ಸೂಚನೆ ನೀಡುವುದು. ಇದನ್ನು ಮಾಡಿದರೆ ನಿಮ್ಮಲ್ಲಿ ಅದ್ಭೂತ ಬದಲಾವಣೆ ಆಗುತ್ತದೆ. ನೀವು ವೈದ್ಯರ ಬಳಿ ಹೋಗಬೇಕಾದ ಅವಶ್ಯಕತೆ ಸಾವುಕಾಶವಾಗಿ ಮಾಯವಾಗುತ್ತದೆ. ದೇವರು ಅನ್ನಿ ಪ್ರಕೃತಿ ಅನ್ನಿ ನಮ್ಮ ದೇಹಕ್ಕೆ ಇಂತಹ ಶಕ್ತಿ ಇದೆ. ಅದು ಸ್ವಯಂ ರೋಗ ಗುಣಪಡಿಸುವ ಶಕ್ತಿ.
ಇದಕ್ಕೆ ಸರಳ ವಿಧಾನಗಳಿವೆ. ಯಾವ ಖರ್ಚೂಇಲ್ಲ . ಹಾಗಿದ್ದರೆ ದೇಹದ ಮಾತು ಕೇಳಿಸಿಕೊಳ್ಳುವುದು ಹೇಗೆ ? ನಿಮ್ಮ ರೋಗಗಳಿಗೆ ನೀವು ಪರಿಹಾರ ಕಂಡುಕೊಳ್ಳುವುದು ಹೇಗೆ. ಈ ಅದ್ಭುತ ವಿದ್ಯೆಯ ಬಗ್ಗೆ ನಾಳೆ ವಿವರ ನೀಡ್ತೀವಿ. ನಮಸ್ಕಾರ.
