ಮನುಷ್ಯನಂತಹ ಸೂಪರ್ ಕಂಪ್ಯೂಟರ್ ಬೇರೆ ಇಲ್ಲ. ಈ ಸೂಪರ್ ಕಂಪ್ಯೂಟರ್ ನಿಂದ ಬೇರೆ ಕಂಪ್ಯೂಟರ್ ಗಳ ನಿರ್ಮಾಣವಾಗಿದೆ ಅಷ್ಟೇ. ಆದ್ದರಿಂದ ಯೋಚಿಸಿ. ನಿಮ್ಮ ಬಳಿ ಅತ್ಯದ್ಭುತವಾದ ಸೂಪರ್ ಕಂಪ್ಯೂಟರ್ ಇದೆ. ಅದನ್ನು ಬಳಸಿಕೊಳ್ಳಿ ಸಾಕು. ನೀವು ರೋಗ ರಹಿತ ಜೀವನವನ್ನು ಸಾಗಿಸಬಹುದು.

ದೇಹದ ಮಾತು ಕೇಳಿಸಿಕೊಳ್ಳುವ ಪೂರ್ವ ಸಿದ್ಧತೆಯ ಬಗ್ಗೆ ನಿನ್ನೆ ಮಾತನಾಡಿದ್ದೆವು. ಅದು ದೇಹ ಶುದ್ಧಿ ಮತ್ತು ಮನಸ್ಸು ಶುದ್ಧಿ. ದೇಹ ಶುದ್ದಿಯ ಕೆಲವು ವಿವರಗಳನ್ನು ನೀಡಿದ್ದೇವು. ದೇಹ ಶುದ್ಧಿಯಲ್ಲಿ ಮಹತ್ವದ ಅಂಶ ಅಂದರೆ ಅಂಗ ಶುದ್ಧಿ ಅಥವಾ ಸ್ನಾನ. ಸ್ನಾನ ಎಂದರೆ ಸುಮ್ಮನೆ ದೇಹದ ಮೇಲೆ ನೀರು ಸುರಿದುಕೊಳ್ಳುವುದಲ್ಲ. ನಿಮ್ಮ ದೇಹದಲ್ಲಿ ಪ್ರತಿ ಶತ 70 ರಷ್ಟು ನೀರಿದೆ. ನೀವು ಹೊರಗಿನಿಂದ ಹಾಕಿಕೊಳ್ಳುವ ನೀರು ದೇಹದ ಒಳಗಿನ ನೀರಿನ ಜೊತೆ ಸಂವಹನ ನಡೆಸಬೇಕು. ಎರಡೂ ನೀರುಗಳು ಒಂದಾಗಬೇಕು. ಅದು ಸಾಧ್ಯ. ಮನಸ್ಸು ಅದನ್ನು ಸಾಧ್ಯವಾಗಿಸುತ್ತದೆ. ಮನಸ್ಸು ಹೇಳಿದ್ದನ್ನು ನೀರು ಕೇಳಿಸಿಕೊಳ್ಳುತ್ತದೆ ಎಂಬುದು ನಿಮಗೆ ಗೊತ್ತಿರಬಹುದು.

ನೀರಿಗೂ ಮನಸ್ಸಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಜಪಾನಿನಲ್ಲಿ ನಡೆದ ಯಶಸ್ವಿ ಸಂಶೋಧನೆ ಅದು. ಹೊರಗಿನ ಜಗತ್ತಿನಲ್ಲಿ ಆಗುವದಕ್ಕೆ ನೀರು ಪ್ರತಿ ಕ್ರಿಯೆ ನೀಡುತ್ತದೆ. ಅದನ್ನು ನಾನು ನಿಮಗೆ ವಿವರಿಸುತ್ತೇನೆ. ನೀವು ಮನಸ್ಸಿನ ಮುದ ನೀಡುವ ಸಂಗೀತವನ್ನು ಹಾಕಿದ್ದೀರಿ ಎಂದುಕೊಳ್ಳಿ. ಆಗ ಅಲ್ಲಿರುವ ನೀರು ಸಂತೋಷ ಪಡಬಲ್ಲದು. ಅದು ನೀರಿನ ಮೆಲ್ಮೈಯಲ್ಲಿನ ತರಂಗದಲ್ಲಿ ಗೋಚರವಾಗುತ್ತದೆ. ತರಂಗದ ಆಕಾರವೇ ಬದಲಾಗುತ್ತದೆ. ಯಾವುದೇ ಕರ್ಕಶವಾದ ಸಂಗೀತವನ್ನು ಹಾಕಿ, ಆಗ ನೀರಿನ ಮೇಲೆ ಬೇರೆ ರೀತಿಯ ತರಂಗಗಳು ಹುಟ್ಟಿಕೊಳ್ಳುತ್ತವೆ. ಅದು ತನಗಾಗುವ ಹಿಂಸೆ, ಸಂತೋಷ ಮೊದಲಾದ ಭಾವನೆಗಳನ್ನು ಬೇರೆ ಬೇರೆ ರೀತಿಯ ತರಂಗಗಳ ಮೂಲಕ್ ತೋರಿಸುತ್ತದೆ. ಈ ಬಗ್ಗೆ ಇನ್ನೊಮ್ಮೆ ಮಾತನಾಡೋಣ.

ನಾನು ಮೈ ಮೇಲೆ ನೀರು ಹಾಕಿಕೊಳ್ಳುವುದರ ಬಗ್ಗೆ ಹೇಳುತ್ತಿದ್ದೆ. ಅದೇ ಸ್ನಾನ. ಈ ನೀರುಹಾಕಿಕೊಳ್ಳುವಾಗ ಒಂದು ರೀತಿಯ ತಾದ್ಯಾತ್ಮ ಬೇಕು. ನಿಮ್ಮ ಮೈಮೇಲೆ ಬೀಳುತ್ತಿರುವ ನೀರು ದೇಹದ ಒಳಗಿನ ನೀರಿನ ಜೊತೆ ಸಂವಹನ ನಡೆಸುತ್ತಿದೆ ಎಂದುಕೊಳ್ಳಿ. ನಿಮ್ಮ ದೇಹದ ಭಾಗವಾಗಿರುವ ನೀರು ಹೊರಗಿನಿಂದ ಬೀಳುವ ನೀರನ್ನು ಪ್ರಿತಿಯಿಂದ ಸ್ವಾಗತಿಸಬೇಕು. ಇವೆರಡೂ ತಮ್ಮದೇ ಆದ ಭಾಷೆಯಲ್ಲಿ ಮಾತನಾಡಬೇಕು. ಆಗ ನಿಮಗಾಗುವುದು ದಿವ್ಯ ಅನುಭವ. ಆ ಅನುಭವವನ್ನು ವಿವರಿಸುವುದಕ್ಕೆ ಶಬ್ದಗಳೇ ಇರುವುದಿಲ್ಲ.

ಈ ನೀರು ಹಾಕಿಕೊಳ್ಳುವುದು ಮತ್ತು ನೀರಿನ ನಡುವಿನ ತಾದ್ಯಾತ್ಮ ನಿಮ್ಮ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಹದ ಒಳಗಿನ ಸಮಸ್ಯೆ ಮತ್ತು ರೋಗಗಳು ಗುಣವಾಗುವುದಕ್ಕೆ ಮೊದಲ ಹೆಜ್ಜೆ ಇದು. ಹಾಗೆ ನೀವು ಸ್ನಾನಕ್ಕೆ ಬಳಸುವ ನೀರು ಯಾವುದು ಅದು ಹೇಗಿರಬೇಕು ಎಂಬುದು ಬಹಳ ಮುಖ್ಯ.

ನಿಮ್ಮ ದೇಹದ ತಾಪಮಾನ ಮತ್ತು ನೀವು ಬಳಸುವ ನೀರಿನ ತಾಪ ಮಾನದ ನಡುವೆ ಸಂಬಂಧವಿದೆ. ಹಾಗೆ ನೀವು ಯಾವ ಹೊತ್ತಿನಲ್ಲಿ ಸ್ನಾನ ಮಾಡುತ್ತೀರಿ ಮತ್ತು ಯಾವ ತಾಪಮಾನದ ನೀರನ್ನು ಬಳಸುತ್ತೀರಿ ಎಂಬುದು ಬಹಳ ಮುಖ್ಯ. ಇದೆಲ್ಲ ನಿಮ್ಮ ದೇಹದ ಮಾತನ್ನು ಕೇಳಲು ಸಿದ್ದಗೊಳ್ಳುವ ಮೊದಲ ಹೆಜ್ಜೆಗಳು. ಕುರಿತು ಮುಂದಿನ ವಿವರಗಳನ್ನು ಮುಂದಿನ ಉಪನ್ಯಾಸದಲ್ಲಿ ನೀಡುತ್ತೇವೆ. ತಾವು ಈಗ ಹೇಳಿರುವುದನ್ನು ಮನನ ಮಾಡಿಕೊಳ್ಳು. ಮುಂದಿನ ಹೆಜ್ಜೆ ಇಡಲು ಸಿದ್ದರಾಗಿ.

Author

Leave a Reply

Your email address will not be published. Required fields are marked *