ಅರವಿಂದ ಕೇಜ್ರಿವಾಲ್ ಅವರ ಕಾನೂನು ತಂಡ ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಪ್ರಶ್ನೆಗಳಲ್ಲಿ ಚುನಾವಣೆಗೆ ಮುನ್ನ ಅವರನ್ನು ಬಂಧಿಸಿದ್ದು ಯಾಕೆ ಎಂಬ ಪ್ರಶ್ನೆಯೂ ಇದೆ.
, ಅರವಿಂದ ಕೇಜ್ರಿವಾಲ್ ಅವರ ಬಂಧನದ ಸಮಯಕ್ಕೆ ಸಂಬಂಧಿಸಿದಂತೆ ಇರುವ ಕೆಲವೊಂದು ಅನುಮಾನಗಳ ಕುರಿತೂ ಇಡಿ ಉತ್ತರ ನೀಡಬೇಕಾಗಿದೆ.
ಅಬ್ಕಾರಿ ನೀತಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರ ಬಂಧನದ ಕುರಿತಂತೆ ನ್ಯಾಯಮೂರ್ತಿ ಸಂಜಯ್ ಖನ್ನಾ ಅವರು ಹೇಳಿದ ಮಾತು.
ಸ್ವಾತಂತ್ರ್ಯ ಅನ್ನುವುದು ಬಹಳ ಮುಖ್ಯವಾದುದು. ಅದನ್ನು ನೀವು ನಿರಾಕರಿಸಲಾಗದು.
ಈ ಕಾರ್ಯವನ್ನು ಪ್ರಾರಂಭೀಸಿದ ಸಮಯ ಮತ್ತು ಮತ್ತು ಮುಂದುವರಿದ ಸಮಯದ ನಡುವಿನ ಅಂತರದ ಬಗ್ಗೆ ತಾವು ವಿವರ ನೀಡಬೇಕು ಎಂದು ನ್ಯಾಯಪೀಠ ಸೂಚಿಸಿತು
ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಗ್ವಿ ಕೇಜ್ರಿವಾಲ್ ಪರವಾಗಿ ವಾದ ಮಂಡಿಸಿದರು. ಈ ಆರೋಪಕ್ಕೆ ಸಂಬಂಧಿಸಿದ ವಿವರಗಳಾಗಲಿ, ಅರವಿಂದ್ ಕೇಜ್ರಿವಾಲ್ ಇದರ ಭಾಗೀದಾರರು ಎನ್ನುವುದಕ್ಕೆ ಏನೂ ಇಲ್ಲ ಎಂದು ಅವರು ನ್ಯಾಯಲಯಕ್ಕೆ ತೀಲಿಸಿದರು.
ಈ ಎಲ್ಲ ಪ್ರಶ್ನೆಗಳಿಗೆ ಮೇ ೩ ಕ್ಕೆ ಉತ್ತರ ನೀಡುವಂತೆ ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿತು.
