ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್.ಐ. ಟಿ ನೋಟೀಸು ನೀಡಿದೆ.
ಮಂಗಳವಾರ ನೀಡಿದ ಈ ನೋಟೀಸಿನ ಪ್ರಕಾರ ನೋಟೀಸು ತಲುಪಿದ ೨೪ ಗಂಟೆಯ ಒಳಗೆ ಇಬ್ಬರೂ ಪೋಲಿಸ್ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕು.
ಹೋಳೇನರಸೀಪುರ ಪೊಳೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಧಿಸಿದಂತೆ ವಿಚಾರಣೆ ನಡೆಸುವ ಅಗತ್ಯವಿದೆ. ಹೀಗಾಗಿ ಸಿ ಆರ್ ಪಿ ಸಿ ೪೧ ಎ ಎ ಆಡಿಯಲ್ಲಿ ನೋಟೀಸು ನೀಡಲಾಗಿದೆ ಎಂದು ಅಧಿಕಾರಿಗಳು ತಿಳೀಸಿದ್ದಾರೆ.
ಎಚ್. ಡಿ. ರೇವಣ್ಣ ರಾಜ್ಯದಲ್ಲಿ ಎರುವುದರಿಂದ ಅವರು ವಿಚಾರಣೆಗೆ ಹಾಜರಾಗುವುದು ಕಷ್ಟವಾಗಲಾರದು. ಆದರೆ ಈಗ ಜರ್ಮನಿಯಲ್ಲಿ ಇರುವರೆಂದು ಹೇಳಲಾದ ಪ್ರಜ್ವಲ್ ರೇವಣ್ಣ ಅವರು ವಾಪಸ್ ಹೊರಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾವಾಗ ಅವರು ವಾಪಸ್ ಬರಭುದು ಎಂಬುದೂ ತಿಳಿದಿಲ್ಲ.
