Prajwal Revanna Case: ವಿಚಾರಣೆಗೆ ಹಾಜರಾಗಲು 7 ದಿನ ಸಮಯ ನೀಡಲು ಸಾಧ್ಯವಿಲ್ಲ, ಪ್ರಜ್ವಲ್ ಗೆ ಇನ್ನೊಂದು ನೋಟೀಸು ನೀಡಿದ SIT

Prajwal Revanna Case: ವಿಚಾರಣೆಗೆ ಹಾಜರಾಗಲು ಏಳು ದಿನ ಕಾಲಾವಕಾಶ ಬೇಕು ಎಂಬ ಪ್ರಜ್ವಲ್ ರೇವಣ್ಣ ಅವರ ಮನವಿಯನ್ನು ಎಸ್ಐಟಿ ತಿರಸ್ಕರಿಸಿದೆ

ಬೆಂಗಳೂರು : ತಾವು ದೇಶದಲ್ಲಿ ಇಲ್ಲದ ಕಾರಣ ವಿಚಾರಣೆಗೆ ಹಾಜರಾಗಲು ಏಳು ದಿನ ಕಾಲಾವಕಾಶ ಬೇಕು ಎಂಬ ಪ್ರಜ್ವಲ್ ರೇವಣ್ಣ ಅವರ ಮನವಿಯನ್ನು ಎಸ್ಐಟಿ ತಿರಸ್ಕರಿಸಿದೆ. ಈ ಸಂಬಂಧದಲ್ಲಿ ಇನ್ನೊಂದು ನೋಟೀಸನ್ನು ಅವರಿಗೆ ಕಲುಹಿಸಲಾಗಿದೆ.

ಜರ್ಮನಿಯಲ್ಲಿ ಇದ್ದಾರೆ ಎಂದು ನಂಬಲಾದ ಪ್ರಜ್ವಲ್ ತಮ್ಮ ವಕೀಲರ ಮೂಲಕ ಎಸ್ ಐ ಟಿಗೆ ಪತ್ರವೊಂದನ್ನು ಬರೆದ್ದರು. ಈ ಪತ್ರದಲ್ಲಿ ತಮಗೆ 7 ದಿನಗಳ ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಲಾಗಿತ್ತು.

ಇದಕ್ಕೂ ಮೊದಲು ಪ್ರಜ್ವಲ್ ಮತ್ತು ಅವರ ತಂದೆ ರೇವಣ್ಣ ಅವರಿಗೆ ಪ್ರತ್ಯೇಕ ನೋಟೀಸು ನೀಡಿದ್ದ ಎಸ್ ಐ ಟಿ ಈ ನೋಟೀಸು ತಲುಪಿದ 24 ಗಂಟೆಯ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು.

Author

error: