ಎಲ್ಲಿದ್ದಾರೆ ಪ್ರಜ್ವಲ್ ರೇವಣ್ಣ ?
ಅವರು ಜರ್ಮನಿಯಲ್ಲಿ ಇರುವುದು ನಿಜವೆ ?
ಬೆಂಗಳೂರಿಗೆ ವಾಪಸ್ ಆಗಲು ಯಾಕೆ ಒಂದು ವಾರ ಬೇಕು ?
ಲೈಂಗಿಕ ದೌರಜನ್ಯ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ನ ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೋರಿದ್ದಾರೆ. ತಮಗೆ ೭ ದಿನಗಳ ಕಾಲಾವಕಾಶ ಬೇಕು ಎಂದು ಅವರು ಕೇಳಿದ್ದಾರೆ.
ಈಗ ವಿದೇಶದಲ್ಲಿ ಇದ್ದಾರೆ ಎಂದು ಹೇಳಲಾದ ರೇವಣ್ನ ಅವರ ಪರವಾಗಿ ವಕೀಲ ಅರುಣ್ ಎಂಬವರು ಎಸ್ ಐ ಟಿ ಗೆ ಪತ್ರ ಬರೆದಿದ್ದಾರೆ.
ಪ್ರಜ್ವಲ್ ಅವರು ಈಗ ವಿದೇಶದಲ್ಲಿ ಇರುವುದರಿಂದ ಅವರಿಗೆ ಕನಿಷ್ಠ ೭ ದಿನಗಳ ಕಾಲಾವಕಾಶ ಬೇಕು. ಅವರು ಹಿಂತಿರುಗಿ ಬಂದ ಮೇಲೆ ಇನ್ನೊಂದು ದಿನಾಂಕವನ್ನು ನೀಡಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಈ ಮನವಿ ಪತ್ರವನ್ನು ಗಮನಿಸಿದರೆ ಪ್ರಜ್ವಲ್ ಒಂದೆರಡು ದಿನಗಳಲ್ಲಿ ವಾಪಸ್ ಆಗುವ ಸಂಭವ ಕಡಿಮೆ. ಈ ಹಂತದಲ್ಲಿ ಎಸ್ ಐ ಟಿ ಪೋಲೀಸರು ಏನು ಮಾಡುತ್ತಾರೆ ಎಂಬುದು ಪ್ರಶ್ನೆ.
ಪ್ರಜ್ವಲ್ ಇರುವ ದೇಶಕ್ಕೆ ಹೋಗಿ ಅವರನ್ನು ಕರೆತರುತ್ತಾರೆಯೆ ಎಂಬ ಬಗ್ಗೆ ತೀರ್ಮಾನವಾಗಬೇಕು. ಅದಿಲ್ಲ ಇನ್ನೊಂದು ವಾರ ಕಾಯಬೇಕು.
ವಿದೇಶಕ್ಕೆ ಹೋಗಿ ಅವರನ್ನು ಕರೆ ತರುವುದಿದ್ದರೆ ಅದಕ್ಕೆ ಕೇಂದ್ರ ಸರ್ಕಾರದ ಸಹಕಾರದ ಅಗತ್ಯವೂ ಇರುತ್ತದೆ.
