ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಸಲ್ಮಾನ್ ಮನೆಯ ಮೇಲೆ ಗುಂಡಿನ ದಾಳಿ; ಆರೋಪಿ ಆತ್ಮಹತ್ಯೆ.
ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡು ಹೊಡೆದವ ಆತ್ಮಹತ್ಯೆ ?
ಇದು ಲಾಕ್ ಅಪ್ ಡೆತ್ ಅಲ್ಲವೆ ?
ಈ ಸಾವಿಗೆ ಏನು ಕಾರಣ ? ಯಾರು ಕಾರಣ ?
ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ ಜೈಲಿನಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ,
೩೨ ವರ್ಷದ ಅನೂಜ್ ತಪನ್ ಎಂಬ ಹೆಸರಿನ ಈ ಯುವಕ ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡು ಹಾರಿಸಿದ್ದ ಎಂದು ಆರೋಪಿಸಲಾಗಿತ್ತು. ಏಪ್ರಿಲ್ ೨೬ ರಂದು ಈ ಆರೋಪಿಯನ್ನು ಬಂಧಿಸಲಾಗಿತ್ತು.
ಇಂದು ಬೆಳಿಗ್ಗೆ ೧೧ ಗಂಟೆಯ ಹೊತ್ತಿಗೆ ಶೌಚಾಲಯಕ್ಕೆ ಹೋದವನು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಪೊಲೀಸ್ ಲಾಕ್ ಅಪ್ ನಲ್ಲಿದ್ದ ಇವನ ಜೊತೆ ಇನ್ನೂ ೧೦ ಜನ ಇದ್ದರು ಎಂದು ಹೇಳಲಾಗುತ್ತಿದೆ.
ಈ ಆತ್ಮಹತ್ಯೆ ಪ್ರಕರಣದ ವಿವರಗಳು ಇನ್ನೊ ಹೊರಕ್ಕೆ ಬರಬೇಕಾಗಿದೆ.
