ಗೂಢಚಾರಿಕೆ. ಇಬ್ಬರು ಭಾರತೀಯ ಗೂಢಚಾರರನ್ನು ಹೊರಕ್ಕೆ ಕಳುಹಿಸಿದ ಆಸ್ಟ್ರ‍ೇಲಿಯಾ ?

ಭಾರತದ ಗೂಢಚಾರ ಸಂಸ್ಥೆ ರಾ ಕುರಿತು ವಿಶ್ವದಲ್ಲಿ ಈಗ ಗಂಭೀರ ಸ್ವರೂಪದ ಚರ್ಚೆ ಪ್ರಾರಂಭವಾಗಿದೆ. ಕೆನಡಾದಲ್ಲಿ ಖಾಲಿಸ್ಥಾನಿ ಪ್ರತ್ಯೇಕತಾವಾದಿಯ ಹತ್ಯೆ ನಂತರ ಅಮೇರಿಕದಲ್ಲಿ ಇನ್ನೊಬ್ಬ ಪ್ರತ್ಯೇಕತಾವಾದಿಯ ಹತ್ಯೆಯ ಯತ್ನ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ನಡುವೆ ೨೦೨೦ ರಲ್ಲಿ ಆಸ್ಟ್ರ‍ೇಲಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಭಾರತೀಯ ಗೂಢಚಾರರನ್ನು ಹೊರಹಾಕಲಾಗಿತ್ತು ಎಂಬ ಸ್ಪೋಟಕ ವರದಿಯೊಂದು ಬಂದಿದೆ. ಈ ವರದಿಯ ಕುರಿತು ಆಸ್ಟ್ರ‍ೇಲಿಯಾ ಮೌನವಾಗಿದೆ. ಇದು ಭಾರತದ ಆತಂಕಕ್ಕೆ ಕಾರಣವಾಗಿದೆ.
ಅಮೇರಿಕ ಸಿಖ್ ಪ್ರತ್ಯೇಕತಾವಾದಿ ಪನ್ನು ಹತ್ಯೆ ಕುರಿತು ಭಾರತ ಉತ್ತರದಾಯಿತ್ವವನ್ನು ಪ್ರದರ್ಶಿಸಬೇಕು ಎಂದು ಅಮೇರಿಕ ಕಟು ಶಬ್ದಗಳಲ್ಲಿ ಸೂಚನೆ ನೀಡಿದ ಬೆನ್ನಲ್ಲೇ ಈ ಆಸ್ಟ್ರ‍ೇಲಿಯಾ ಗೂಢಚಾರಿಕೆ ವರದಿ ಬಂದಿದೆ. ಈ ಬಗ್ಗೆ ಆಸ್ಟ್ರ‍ೇಲಿಯಾ ಮೌನವಾಗಿದೆ.
ವರದಿಗಳ ಪ್ರಕಾರ ಈ ಇಬ್ಬರು ಭಾರತೀಯ ಗೂಢಚಾರರು ಅಲ್ಲಿನ ರಕ್ಷಣಾ ವ್ಯವಸ್ಥೆ, ವಿಮಾನ ನಿಲ್ದಾಣಗಳಲ್ಲಿನ ಅಳವಡಿಸಲಾದ ಸೂಕ್ಷ ವ್ಯವಸ್ಥೆಯ ಕುರಿತು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು.
ಈ ಆರೋಪದ ಹಿನ್ನೆಲೆಯಲ್ಲಿ ಭಾರತದ ಇಬ್ಬರು ಗೂಢಚಾರರನ್ನು ಭಾರತಕ್ಕೆ ವಾಪಸ್ಸು ಕಳುಹಿಸಲಾಗಿತ್ತು ಎಂದೂ ವರದಿಯಾಗಿದೆ.

Author

Leave a Reply

Your email address will not be published. Required fields are marked *