ನಾನೂ ವಾಟ್ಸ್ ಆಪ್ ನಲ್ಲಿ ಬಂದಂತಹ ಸಂಸದ ಪ್ರಜ್ವಲ್ ರೇವಣ್ಣ ಅವರ ಕೆಲವು ಅಶ್ಲೀಲ್ ವಿಡಿಯೋಗಳನ್ನು ನೋಡಿದ್ದೇನೆ. ಅವರ ನೀಚ ಕೃತ್ಯದ ವಿಡಿಯೋವನ್ನು ಎರಡು ಕ್ಷಣವೂ ನೋಡಲು ಆಗಲಿಲ್ಲ
ಇದು ಸಂಸದ ಡಿ.ಕೆ. ಸುರೇಶ್ ಹೇಳಿದ ಮಾತಿದು
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್ ಅವರು, ಒಬ್ಬ ಹುಡುಗ ತನ್ನ ತಾಯಿ ವಯಸ್ಸಿನ ಮನೆಗೆಲಸದ ಮಹಿಳೆಯೊಂದಿಗೆ ನಡೆದುಕೊಂಡಿರುವುದು ಅಸಹ್ಯಕರ. ಆ ಅಸಹ್ಯವನ್ನು ಎರಡು ಕ್ಷಣವೂ ನೋಡಲು ಆಗಲಿಲ್ಲ. ಯಾವ ನಂಬಿಕೆ ಇಟ್ಟುಕೊಂಡು ಮಹಿಳೆಯರು ಕೆಲಸಕ್ಕೆ ಹೋಗುವುದು? ಎಂದು ಪ್ರಶ್ನಿಸಿದರು.

ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋ ಪೆನ್ ಡ್ರೈವ್ ಮೊದಲು ಡಿಕೆ ಬ್ರದರ್ಸ್ ಕೈ ಸೇರಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ನಮಗೆ ವಿಷಯ ಗೊತ್ತಿದ್ದರೇ ಇನ್ನು ಮುಂಚೆಯೇ ಹೊರ ಬರುತ್ತಿತ್ತು. ಆರೋಪ ಮಾಡುವುದಕ್ಕಾಗಿ ನಮ್ಮ ಹೆಸರುಗಳನ್ನು ತರಲಾಗುತ್ತಿದೆ. ಗುಸು ಗುಸು ಸುದ್ದಿ ಹಾಸನದಲ್ಲಿ ಇತ್ತು. ಆದರೆ ಸೂಕ್ತ ದಾಖಲೆಗಳು ಇಲ್ಲದೇ ಮಾತನಾಡುವುದು ಸೂಕ್ತವಲ್ಲ. ಹಾಸನದ ಬಿಜೆಪಿ ನಾಯಕ ದೇವರಾಜೇಗೌಡ ಉನ್ನತ ನಾಯಕರಿಗೆ ಪತ್ರ ಬರೆದಿದ್ದರು. ಪ್ರಕರಣದ ಬಗ್ಗೆ ಪ್ರಧಾನಿಗಳು ಹಾಗೂ ಅವರ ಕಾರ್ಯಾಲಯ ಮತ್ತು ಕುಟುಂಬಕ್ಕೆ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು ಎನ್ ಡಿಎ ಅಭ್ಯರ್ಥಿಯನ್ನಾಗಿ ಮಾಡಿ. ಇಡೀ ದೇಶದಲ್ಲೇ ಕನ್ನಡಿಗರಿಗೆ, ಹಾಸನ ಜಿಲ್ಲೆಗೆ ಅವಮಾನ ಮಾಡಿದ್ದಾರೆ ಎಂದರು.

.

Author

Leave a Reply

Your email address will not be published. Required fields are marked *