ಕುಮಾರಣ್ಣನ ಪೆನ್ ಡ್ರೈವ್ ರಹಸ್ಯ ಡಿ,ಕೆ.ಶಿವಕುಮಾರ್ ಅವರಿಗೂ ಗೊತ್ತಂತೆ ?ಯಾವುದಿದು ಪೆಣ್ ಡ್ರೈವ್ ? ಕುಮಾರಣ್ಣನ ಕಿಸೆಯಲ್ಲಿ ಇದ್ದುದಾ ? ಹಾಸನದಲ್ಲಿ ಸಿಕ್ಕಿದ್ದಾ ?

ಕುಮಾರಣ್ಣನ ಪೆನ್ ಡ್ರೈವ್ ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಮೂಲಕ ಪೆನ್ ಡ್ರೈವ್ ಬಗ್ಗೆ ಸಾರ್ವಜನಿಕರಿಗೆ ಇದ್ದ ಕುತೂಹಲವನ್ನು ಅವರು ಮತ್ತಷ್ಟು ಹೆಚ್ಚಿಸಿದ್ದಾರೆ.
ದೇವೇಗೌಡರ ಕುಟುಂಬದಲ್ಲಿ ಈಗ ಪೆನ್ ಡ್ರೈವ್ ಬಗ್ಗೆ ಚರ್ಚೆ ನಡೆಯುತ್ತಿದೆ. ಎಲ್ಲೆಲ್ಲೋ ಪೆನ್ ಡ್ರೈವ್ ಸಿಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಹಾಸನದಲ್ಲಿ ಪೆನ್ ಡ್ರೈವ್ ರಾಶಿಯೇ ಸಿಕ್ಕಿದೆ ಎಂಬ ಮಾತೂ ಕೇಳಿ ಬರುತ್ತಿದೆ.
ಆದರೆ ಈ ಪೆನ್ ಡ್ರೈವ್ ಯಾರದು ಎಂಬುದು ಮಾತ್ರ ತಿಳಿಯುತ್ತಿಲ್ಲ. ಹಾಗೆ ಕುಮಾರಸ್ವಾಮಿ ಹಲವು ತಿಂಗಳುಗಳ ಕಾಲ ತಮ್ಮ ಕಿಸೆಯಲಿ ಇಟ್ಟುಕೊಂಡಿದ್ದ ಪೆನ್ ಡ್ರೈವ್ ಯಾವುದು ? ಗೊತ್ತಿಲ್ಲ. ಹಾಸನದಲ್ಲಿ ಸಿಗುತ್ತಿರುವ ಪೆನ್ ಡ್ರೈವ್ ಇದೇ ಕುಮಾರಣ್ಣ ನ ಕಿಸೆಯಲ್ಲಿದ್ದ ಪೆಣ್ ಡ್ರೈವ್ ಇರಬಹುದೆ ? ಇದಕ್ಕೆ ಕುಮಾರಸ್ವಾಮಿ ಅವರು ಉತ್ತರ ಕೊಡಬೇಕು.
ದೇವೇಗೌಡರ ಕುಟುಂಬದ ಸದಸ್ಯರಿಗೆಲ್ಲ ಈ ಪೆನ್ ಡ್ರೈವ್ ರಹಸ್ಯ ಗೊತ್ತಿದೆ ಎಂಬ ಮಾತೂ ಇದೆ.
ಏನೇ ಇರಲಿ ಶಿವಕುಮಾರ್ ಪೆಣ್ ಡ್ರೈವ್ ನ ಎಲ್ಲ ವಿವರವನ್ನು ಜನರ ಮುಂದೆ ಬಿಚ್ಚಿ ಇಡುತ್ತಾರೆಯೆ ? ನೋಡಬೇಕು.

Author

error: