ನನ್ನ ಪತ್ನಿಗೆ ಏನಾದರೂ ಆದರೆ….? ಸೇನಾ ಮುಖ್ಯಸ್ಥ ಅಸಿಫ್ ಮುನೀರ್ ಗೆ ಇಮ್ರಾನ್ ಖಾನ್ ಎಚ್ಚರಿಕೆ..

Imran Khan; ಎರಡು ಪ್ರಕರಣಗಳಲ್ಲಿ ನನ್ನ ಹೆಂಡತಿಗೆ ಶಿಕ್ಷೆಯಾಗಲು ಸೇನಾ ಮುಖ್ಯಸ್ಥ ಅಸೀಪ್ ಮುನೀರ್ ಒತ್ತಡವೇ ಕಾರಣ ಎಂದು ಇಮ್ರಾನ್ ಹೇಳಿದ್ದಾರೆ.

ಇಸ್ಲಾಮಾಬಾದ್ : ಜೈಲಿನಲ್ಲಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇನಾ ಮುಖ್ಯಸ್ಥ ಜನರಲ್ ಅಸೀಪ್ ಮುನೀರ್ ಅವರ ಮೇಲೆ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ.

ಎರಡು ಪ್ರಕರಣಗಳಲ್ಲಿ ನನ್ನ ಹೆಂಡತಿಗೆ ಶಿಕ್ಷೆಯಾಗಲು ಸೇನಾ ಮುಖ್ಯಸ್ಥ ಅಸೀಪ್ ಮುನೀರ್ ಒತ್ತಡವೇ ಕಾರಣ ಎಂದು ಇಮ್ರಾನ್ ಹೇಳಿದ್ದಾರೆ.

ನನ್ನ ಮೇಲೆ ಇತ್ತಡವಿತ್ತು ಎಂದು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರೇ ಹೇಳಿದ್ದಾರೆ. ಆದ್ದರಿಂದ ಈ ಬಗ್ಗೆ ಯಾವುದೇ ಅನುಮಾನ ಬೇಡ. ಈಗ ನನ್ನ ಹೆಂಡತಿಗೆ ಏನಾದರೂ ಆದರೆ ಜನರಲ್ ಅಸಿಫ್ ಮುನೀರ್ ಮುಂದಿನ ಪರಿಸ್ಥಿತಿಗೆ ಅವರೇ ಜವಾಬ್ದಾರರಾಗುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇಮ್ರಾನ್ ಪತ್ನಿಯ ಭ್ರಷ್ಟಾಚಾರದ ಆರೋಪ ಮತ್ತು ಕಾನೂನು ಬಾಹಿರ ಮದುವೆಗೆ ಸಂಬಂಧಿಸಿದ ಎರಡು ಪ್ರಕರಣಗಳಿದ್ದವು. ಈ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗಿದೆ. ಇಮ್ರಾನ್ ಖಾನ್ ಕೂಡ ಈಗ ಜೈಲಿನಲ್ಲಿದ್ದಾರೆ.

Author

error: