ಚೆನೈ : ಜಿಎಸ್ ಟಿ ಎಂದರೆ ಬಡವರ ಶೋಷಣೆ. ಈಗ ಜಿಎಸ್ ಟಿ ಹೆಸರಿನಲ್ಲಿ ಹೋಟೆಲ್ ತಿಂಡಿಯಿಂದ ಸ್ಕೂಟರ್ ರಿಪೇರಿ ವರೆಗೆ ಈ ಹೆಸರಿನಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ಇದು ಎಲ್ಲಿಗೆ ತಲುಪುತ್ತದೆಯೋ ತಿಳಿಯದು ಎಂಬ ಆತಂಕವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಈ ಜಿಎಸ್ಟಿ ಸಾಮಾನ್ಯ ಜನರನ್ನು ಬಡವರನ್ನು ಹೈರಾಣಾಗಿಸಿದೆ. ಅದಕ್ಕೆ ಜಿ ಎಸ್ ಟಿ ಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಸಾಮಾನ್ಯ ಜನ ಕರೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಈ ದೇಶದಲ್ಲಿ ಬರುವ ತೆರಿಗೆ ಹಣದಲ್ಲಿ ಪ್ರತಿಶತ 85 ರಷ್ಟು ತೆರಿಗೆ ಹಣ ಸಂಗ್ರಹವಾಗುವುದು ಸಾಮಾನ್ಯ ಜನರಿಂದ. ಕಾರ್ಪುರೇಟ್ ಜಗತ್ತಿನಿಂದ ಅಲ್ಲ. ಆದರೆ ಕೇಂದ್ರ ಸರ್ಕಾರ 1.45 ಲಕ್ಷ ಕೋಟಿ ಕಾರ್ಪುರೇಟ್ ತೆರಿಗೆ ಹಣವನ್ನು ಮನ್ನಾ ಮಾಡಿದೆ ಎಂದು ಅವರು ದೂರಿದರು.
ಇನ್ನು ಮುಂದೆ ಸೆಲ್ಫಿ ತೆಗೆಯುವುದಕ್ಕೂ ಜಿ ಎಸ್ ಟಿ ಹಾಕಿದರೂ ಆಶ್ಚರ್ಯವಿಲ್ಲ ಎಂದು ಸ್ಟಾಲಿನ್ ಹೇಳಿದರು.
