ಮುಂಬೈ : ದುಡ್ಡು ಇರುವವರಿಗೆಲ್ಲ ಬುದ್ದಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ಕಾಮನ್ ಸೆನ್ಸ್ ಕೂಡ.. ಈ ಮಾತು ಹೇಳಿದ್ದು ಮುಂಬೈ ಇಂಡಿಯನ್ಸ್ ತಂಡದ ಮಾಲಿಕರ ಕುರಿತು. ಈ ತಂಡದ ಕೋ ಫೌಂಡರ್ ಆಕಾಶ ಅಂಬಾನಿ. ಅಂಬಾನಿ ಸಾಮ್ರಾಜ್ಯದ ಯುವರಾಜ.

ಈ ವರ್ಷ ಐಪಿಎಲ್ ಪ್ರಾರಂಭವಾಗುವಾಗ ಭಾರಿ ಬದಲಾವಣೆ. ಮುಂಬೈ ಇಂಡಿಯನ್ಸ್ ಕೈ ಹಾಕಿತು. ಐದು ಬಾರಿ ಟ್ರೋಫಿ ತಂದು ಕೊಟ್ಟ ರೋಹಿತ್ ಶರ್ಮ ಅವರನ್ನು ನಾಯಕ ಪಟ್ಟದಿಂದ ಇಳಿಸಿತು. ಹಾರ್ದಿಕ್ ಪಾಂಡ್ಯ ಅವರನ್ನು ನಾಯಕ ಪಟ್ಟಕ್ಕೆ ಏರಿಸಿತು. ಇದು ದೊಡ್ಡ ಪ್ರಮಾದ ಎಂಬುದು ಈಗ ಅರಿವಾಗುತ್ತಿದೆ.

ಆದರೆ ಸಮಯ ಮೀರಿ ಹೋಗಿದೆ. ಮುಂಬೈ ಇಂಡಿಯನ್ ತಂಡದಲ್ಲಿ ರಾಜಕೀಯ. ಎರಡು ಗುಂಪು . ಗುಜರಾತ್ ತಂಡದ ನಾಯಕರಾಗಿ ಯಶಸ್ವಿಯಾದ ಹಾರ್ದಿಕ್ ಇಲ್ಲಿ ಸೋಲುತ್ತಿದ್ದಾರೆ. ತಂಡವನ್ನು ಒಂದಾಗಿ ತೆಗೆದುಕೊಂಡು ಹೋಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಈ ಹಂತದಲ್ಲಿ ಮತ್ತೆ ರೋಹಿತ್ ನಾಯಕರಾಗುತ್ತಾರೆ ಎಂಬ ಮಾತೂ ಕೇಳಿ ಬರುತ್ತದೆ.

ಈ ನಡುವೆ ಮುಂಬೈ ಇಂಡಿಯನ್ ತಂಡದ ಮಾಲಿಕರು ರೋಹಿತ್ ಗೆ ಪೂಸಿ ಹೊಡೆಯಲು ಪ್ರಾರಂಭಿಸಿದ್ದಾರೆ. ಆಕಾಶ್ ಅಂಬಾನಿ ರೋಹಿತ್ ಮೇಲೆ ಎಲ್ಲೂ ಇಲ್ಲದ ಪ್ರೀತಿ ತೋರಿಸುತ್ತಿದ್ದಾರೆ.

ಇವತ್ತು ಬೆಂಗಳೂರು ರಾಯಲ್ ಚಾಲೇಂಜರ್ ತಂಡದ ವಿರುದ್ಧ ಮಹತ್ವದ ಪಂದ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಆಕಾಶ್ ಅಂಬಾನಿ ಸಾಹೇಬರು ತಮ್ಮ ಕಾರಿನಲ್ಲಿ ರೋಹಿತ್ ಶರ್ಮಾ ಅವರನ್ನು ಕೂಡ್ರಿಸಿಕೊಂಡು ವಾಂಖೆಡೆ ಕ್ರೀಡಾಂಗಣಕ್ಕೆ ಹೋದರಂತೆ. ಒಬ್ಬರೂ ಕ್ರೀಡಾಂಗಣದ ಸುತ್ತು ಹಾಕಿದರು. ಇದು ಯಾವುದರ ಮುನ್ಸೂಚನೆಯೊ ಗೊತ್ತಿಲ್ಲ. ಕೆಟ್ಟ ಮೇಲೆ ಬುದ್ದಿ ಬಂದಿದ್ದು ಇರಬಹುದು. ಅಥವಾ ರೋಹಿತ್ ಅವರ ಮನವೊಲಿಸುವ ಯತ್ನವೂ ಇರಬಹುದು. ಇದು ದೊಡ್ದವರ ಕಥೆ. ದೊಡ್ದ ಕಥೆ.

Author

Leave a Reply

Your email address will not be published. Required fields are marked *