ಟೊರೊಂಟೊ ; ಭಾರತದ ಮೂಲದ ಬಿಲ್ಡರ್ ಒಬ್ಬರು ಕೆನಡಾದಲ್ಲಿ ಹತ್ಯೆಯಾಗಿದ್ದಾರೆ. ಅವರ ಮೇಲೆ ಗುಂಡಿನ ದಾಳಿ ನಡೆಯಿತು. ಈ ಸಂದರ್ಭದಲ್ಲಿ ಇನ್ನೊಬ್ಬ ವ್ಯಕ್ತಿಯೂ ಅಸು ನೀಗಿದರು ಎಂದು ವರದಿ ತಿಳಿಸಿದೆ.

ಕೆನಡಾದ ಎಡ್ ಮೊಂಟಾನ್ ನ ಸಿಖ್ ಗುರುಧ್ವಾರದಲ್ಲಿ ಅವರು ಪ್ರಮುಖ ವ್ಯಕ್ತಿಯಾಗಿದ್ದರು. ಇವರು ತಮ್ಮ ನಿರ್ಮಾಣ ಕಾಮಗಾರಿಯ ಸೈಟ್ ನಲ್ಲಿದ್ದಾಗ ಈ ಹತ್ಯೆ ನಡೆಯಿತು ಎಂದು ಹೇಳಲಾಗಿದೆ.

ಬೂಟಾ ಸೀಂಗ್ ಗಿಲ್ ಎಂಬ ಹೆಸರಿನ ಇವರು ಕೆನಡಾದಲ್ಲಿ ಉದ್ಯಮಿಯಾಗಿದ್ದರು. ಇಲ್ಲಿನ ಪಂಜಾಬಿ ಸಮುದಾಯದ ಜೊತೆ ಅವರು ನಿಕಟ ಸಂಬಂಧ ಹೊಂದಿದ್ದರು.

ಸೋಮವಾರ ಹಾಡು ಹಗಲು ಈ ಹತ್ಯೆ ನಡೆಯಿತು. ಇನ್ನೊಬ್ಬ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಪೊಲೀಸರು ಈ ಹತ್ಯಾ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಹತ್ಯೆಯ ಹಿಂದಿರುವವರು ಯಾರು ? ಇದಕ್ಕೆ ಕಾರಣಗಳೇನು ಎಂಬುದು ಇನ್ನೂ ಪತ್ತೆಯಾಗಬೇಕಾಗಿದೆ.

ಕೆನಡಾದಲ್ಲಿ ಖಾನಿಸ್ಥಾನಿ ಬೆಂಬಲಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗೆ ಖಾಲಿಸ್ಥಾನಿಗಳನ್ನು ವಿರೋಧಿಸುವವರೂ ಇದ್ದಾರೆ. ಹಾಗೆ ಬೇರೆ ಬೇರೆ ಗುಂಪುಗಳು ಇವೆ. ಇವರೆಲ್ಲ ಅಲ್ಲಿನ ನಾಗರಿಕರಾಗಿರುವುದರಿಂದ ಅವರ ರಕ್ಷಣೆಯ ಹೊಣೆಗಾರಿಕೆ ಅಲ್ಲಿನ ಸರ್ಕಾರದ್ದಾಗಿದೆ.

ಈ ನಡುವೆ ನಿಜ್ಜಾರ್ ಎಂಬ ಖಾಲಿಸ್ಥಾನಿಯ ಹತ್ಯೆ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಕೂಡ ಕೆಟ್ಟಿದೆ.

Author

Leave a Reply

Your email address will not be published. Required fields are marked *