ನವದೆಹಲಿ : ಪಾಕಿಸ್ಥಾನದಲ್ಲಿ ಭಾರತ ಟಾರ್ಗೆಟ್ ಕಿಲ್ಲಿಂಗ್ ನಡೆಸುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಾವು ಮಢ್ಯ ಪ್ರವೇಶ ಮಾಡುವುದಿಲ್ಲ. ಎರಡೂ ದೇಶಗಳು ಮಾತುಕತೆಯ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು . ಈ ವಿಚಾರದಲ್ಲಿ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅಮೇರಿಕ ಹೇಳಿದೆ.
ಬ್ರೀಟೀಷ್ ಪತ್ರಿಕೆ ಗಾರ್ಡಿಯನ್ ಈ ಸಂಬಂಧ ವರದಿಯೊಂದನ್ನು ಪ್ರಕಟಿಸಿತ್ತು. ಈ ವರದಿಯಲ್ಲಿ ಪಾಕಿಸ್ಥಾನದಲ್ಲಿ ಭಾರತ ಗುರಿ ಹತ್ಯೆ ಅಥವಾ ಟಾರ್ಗೆಟ್ ಕಿಲ್ಲಿಂಗ್ ಮಾಡುತ್ತಿದೆ. 2020 ರಿಂದ ಇದುವರೆಗೆ 20 ಜನರ ಹತ್ಯೆಯಾಗಿದೆ ಎಂದು ಹೇಳಲಾಗಿತ್ತು.
ಈ ಬಗ್ಗೆ ಪಾಕಿಸ್ಥಾನ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರದಲ್ಲಿ ಎರಡೂ ದೇಶಗಳು ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳಬೇಕು ಎಂದೂ ಅಮೇರಿಕ ಹೇಳಿದೆ. ಈ ಬೆಳವಣಿಗೆಗಳ ಮೇಲೆ ನಾವು ನಿಗಾ ಇರಿಸಿದ್ದೇವೆ ಎಂದೂ ಅಮೇರಿಕ ತಿಳಿಸಿದೆ.
ಗಾರ್ಡಿಯನ್ ವರದಿಯಲ್ಲಿ ವಿದೇಶಿ ನೆಲದಲ್ಲಿ ಕಾರ್ಯಾಚರಣೆ ನಡೆಸುವ ಭಯೋತ್ಪಾದಕರನ್ನು ಮೂಲೋತ್ಪಾಟನೆ ಮಾಡುವ ಯೋಜನೆಯನ್ನು ಭಾರತ ರೂಪಿಸಿದೆ ಎಂದು ಹೇಳಲಾಗಿತ್ತು.
ಕೆನಡಾದಲ್ಲಿ ನಡೆದ ಖಾಲಿಸ್ಥಾನಿ ಭಯೋತ್ಪಾದಕನ ಹತ್ಯೆಯನ್ನು ಈ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಇದಾದ ಮೇಲೆ ಭಾರತ ಈ ವರದಿಯನ್ನು ಅಲ್ಲಗಳೆದಿತ್ತು. ಈಗ ಅಮೇರಿಕ ಸ್ಟೇಟ್ ಡಿಪಾರ್ಟಮೆಂಟ್ ವಕ್ತಾರ ಮಾಠ್ಯೂ ಮಿಲ್ಲರ್ ಪ್ರತಿಕ್ರಿಯೆ ನೀಡಿದ್ದಾರೆ.







