ಬೆಂಗಳೂರು : ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಿದ್ದು. ಕೆಲವು ಕ್ಷೇತ್ರಗಳಲ್ಲಿ ಬೆಳಿಗ್ಗೆ ಬಹುಬೇಗ ಮತಗಟ್ಟೆಯ ಎದುರು ಮತದಾರರನ್ನು ಕಾಣಬಹುದಾಗಿತ್ತು. ಕೆಲವು ಮತಗಟ್ಟೆ ಎದುರು ಜನ ಸಂದಣಿ ಇರಲಿಲ್ಲ.

ಈ ಹದಿನಾಲ್ಕು ಕ್ಷೇತ್ರಗಳು ಕರ್ನಾಟಕದ ಹಳೇ ಮೈಸೂರು ಪ್ರದೇಶಕ್ಕೆ ಸೇರಿದ ಕ್ಷೇತ್ರಗಳಾಗಿವೆ. ಬೆಂಗಳೂರಿನ ಕ್ಷೇತ್ರಗಳಿಗೂ ಇಂದೇ ಮತದಾನ ನಡೆಯುತ್ತಿದೆ.

ಬೆಂಗಳೂರಿ ನಗರದ ಮತಗಟ್ಟೆಗಳಲ್ಲಿ ಕೆಲವೆಡೆ ಮತದಾರರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಬೆಳಿಗ್ಗೆ ವಾಕಿಂಗ್ ಬಂದವರು ಮತದಾನ ಮಾಡಿ ಕರ್ತವ್ಯ ನಿಭಾಯಿಸುವ ತವಕದಲ್ಲಿದ್ದರು. ಕೆಲವು ಮತ ಗಟ್ಟೆಗಳಲ್ಲಿ ಹೆಚ್ಚಿನ ಮತದಾರರು ಇರಲಿಲ್ಲ.

ಬೆಂಗಳೂರಿನ ಕೆಲವು ಹೋಟೆಲ್ ಗಳಲ್ಲಿ ಮತದಾನ ಮಾಡಿದವರಿಗೆ ಊಚಿತ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ತಾವು ಮತದಾನ ಮಾಡಿದ ಗುರುತುತೋರಿಸಿದರೆ ಬೆಳಗಿನ ತಿಂಡಿ ಉಚಿತ ಮತದಾನ ಮಾಡಿದವರಿಗೆ ಕೆಲವೆಡೆ ಸಿಹಿ ತಿಂಡಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಕೇವಲ ಶೇ.55 ಆಗಿತ್ತು. ಈ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನ್ ಹೆಚ್ಚಿಸಲು ಹೊಟೆಲ್ ಮಾಲಿಕರ ಸಂಘ ಉಚಿತ ಊಟ ತಿಂಡಿ ನೀಡುವ ವ್ಯವಸ್ಥೆ ಮಾಡಿದೆ.

Leave a Reply

Your email address will not be published. Required fields are marked *