ಬೆಂಗಳೂರು : ದೇಶಾದ್ಯಂತ ಇಂದು 2ನೇ ಹಂತದ ಚುನಾವಣೆ ನಡೆಯುತ್ತಿದೆ. ದೇಶದ 88 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಾಗಿದ್ದು ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ.

14 ಕ್ಷೇತ್ರಗಳಲ್ಲಿ ಮತದಾನಕ್ಕೆ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮತದಾನ ಬಿರುಸಿನಿಂದ ಸಾಗಿದೆ.

ಮತದಾನದ ದಿನದ ವಿಶೇಷ ಹೀಗಿದೆ.

ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮತ ಚಲಾಯಿಸಿದ ಮೈಸೂರು-ಕೊಡಗು ಅಭ್ಯರ್ಥಿ ಯದುವೀರ್ ಒಡೆಯರ್.
107 ವರ್ಷದ ಮುನಿ ವೆಂಕಟಪ್ಪ
ಚಿತ್ರದುರ್ಗದ ಸಿರಿಗೆರೆ ಗ್ರಾಮದ ಬಳಿಯ ಸಿದ್ದಾಪುರದ ಮತಗಟ್ಟೆ ಯಲ್ಲಿ ಮತದಾನ ಬಹಿಷ್ಕಾರ
ಹಾಸನದ ಪಡುವಲಹಿಪ್ಪೆಯಲ್ಲಿ ಮತದಾನ ಮಾಡಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ
ಬೆಂಗಳೂರಿನ ನಿಸರ್ಗ ಗ್ರ್ಯಾಂಡ್ ನಲ್ಲಿ ಉಚಿತ ಉಪಹಾರ ಸೇವಿಸಲು ಮತದಾನ ಮಾಡಿ ಬಂದ ನಾಗರಿಕರು
ಮಂಗಳೂರು ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತ ಗಲಾಟೆ. ಈ ವೇಳೆ, ಪೊಲೀಸ್ ಅಧಿಕಾರಿಯನ್ನು ತಳ್ಳಾಡಿದ ಬಿಜೆಪಿ ಕಾರ್ಯಕರ್ತರು .ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತ ಚಲಾಯಿಸಿ ಹೊರ ಬಂದಾಗ ನಡೆದ ಘಟನೆ

ಸ್ಯಾಂಡಲ್‌ವುಡ್‌‌ ಸ್ಟಾರ್ಸ್‌ ಮತದಾನ

ಸ್ಯಾಂಡಲ್​ವುಡ್ ಸ್ಟಾರ್ ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರು ಪತ್ನಿ ಶಿಲ್ಪಾ ಗಣೇಶ್ ಅವರ ಜೊತೆ ಬೆಳಗ್ಗೆಯೇ ಬಂದು ದಂಪತಿ ವೋಟ್ ಮಾಡಿದ್ದಾರೆ. ಪತ್ನಿ ಜೊತೆ ಬಂದು ನಟ ಶ್ರೀ ಮುರುಳಿ ಮತ ಚಲಾಯಿಸಿದರು. ಸ್ಯಾಂಡಲ್​ವುಡ್ ನಟ ವಿನಯ್ ರಾಜ್​ಕುಮಾರ್ ಅವರೂ ಮತ ಚಲಾಯಿಸಿದರು. ಸ್ಯಾಂಡಲ್​ವುಡ್ ನಟ ರಾಘವೇಂದ್ರ ರಾಜ್​ಕುಮಾರ್ ಅವರು ಕೂಡಾ ಮಕ್ಕಳೊಂದಿಗೆ ಬಂದು ವೋಟ್ ಮಾಡಿದ್ದಾರೆ. ಬೆಳಗ್ಗೆಯೇ ಬಂದು ವೋಟ್ ಮಾಡಿದ್ದು ನಂತರ ಮಾಧ್ಯಮದ ಜೊತೆ ಮಾತನಾಡಿದರು.ಅಶ್ವಿನಿ ಪುನೀತ್ ರಾಜ್​​ಕುಮಾರ್ ಅವರೂ ಮತಗಟ್ಟೆಗೆ ಬಂದು ವೋಟ್ ಮಾಡಿ ಹೋಗಿದ್ದಾರೆ. ಅಣ್ಣಾವ್ರ ಫ್ಯಾಮಿಲಿಯ ಸದಸ್ಯರು ಬೆಳ್ಳಂಬೆಳಗ್ಗೆಯೇ ವೋಟ್ ಮಾಡೋಕೆ ಬಂದಿದ್ದರು.ಕಾಂತಾರ ನಟಿ ಸಪ್ತಮಿ ಗೌಡ ಅವರು ಕೂಡಾ ಬೆಳಗ್ಗೆಯೇ ವೋಟ್ ಮಾಡಿ ಹೋಗಿದ್ದಾರೆ.

.

Leave a Reply

Your email address will not be published. Required fields are marked *