ಕೊಲ್ಕತ್ತಾ : ವಿಲ್ ಜಾಕ್ಸ್ ಮತ್ತು ರಜತ್ ಪಾಟೀದಾರ್ ಹೋರಾಟದ ನಡುವೆಯೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ರನ್​​ನಿಂದ ವಿರೋಚಿತ ಸೋಲು ಅನುಭವಿಸಿತು.

ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್​ಸಿಬಿ ಸತತ 6ನೇ ಹಾಗೂ ಒಟ್ಟು 7ನೇ ಸೋಲಿಗೆ ಶರಣಾಯಿತು. ಅಲ್ಲದೆ, ಪ್ಲೇಆಫ್​ ರೇಸ್​ನಿಂದ ಬಹುತೇಕ ಹೊರಬಿದ್ದಿತು.

ಉಳಿದ ಆರು 6 ಪಂದ್ಯಗಳಲ್ಲಿ ಗೆದ್ದರೂ ಪ್ಲೇಆಫ್​ಗೇರುವುದು ಅಸಾಧ್ಯ. ಮತ್ತೊಂದೆಡೆ ಕೆಕೆಆರ್​, ಟೂರ್ನಿಯಲ್ಲಿ 5ನೇ ಜಯದ ನಗೆ ಬೀರಿತು.

ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್​, ಬೃಹತ್ ಮೊತ್ತ ಪೇರಿಸಿತು. ಫಿಲ್ ಸಾಲ್ಟ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಆಕರ್ಷಕದ ಅರ್ಧಶತಕದ ನೆರವಿನಿಂದ 20 ಓವರ್​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಪೇರಿಸಿತು.

ಈ ಗುರಿ ಬೆನ್ನಟ್ಟಿದ ಆರ್​ಸಿಬಿ 221ಕ್ಕೆ ಆಲೌಟ್ ಆಯಿತು. ವಿಲ್ ಜಾಕ್ಸ್ ಮತ್ತು ರಜತ್ ಪಾಟೀದಾರ್ ಅವರು ತಲಾ ಸ್ಫೋಟಕ ಅರ್ಧಶತಕ ಶತಕ ಸಿಡಿಸಿ ಮಿಂಚಿದರೂ ಗೆಲುವು ಸಾಧ್ಯವಾಗಲಿಲ್ಲ. ಕೊನೆಯ ಓವರ್​​ನ ಕೊನೆಯ ಎಸೆತದಲ್ಲಿ ಸೋಲಿಗೆ ಶರಣಾಯಿತು.

Leave a Reply

Your email address will not be published. Required fields are marked *