ನವದೆಹಲಿ : ಇಸ್ರೇಲ್ ಮತ್ತು ಇರಾನ್ ನಡುವಿನ ಹೆಚ್ಚುತ್ತಿರುವ ಬಿಕ್ಕಟ್ಟು ಭಾರತವನ್ನು ಆತಂಕಕ್ಕೆ ದೂಡಿದೆ. ಈ ಬಿಕ್ಕಟ್ಟು ಆದಷ್ಟು ಬೇಗ ಬಗೆಹರಿಯಬೇಕು ಎಂಬುದು ಭಾರತದ ಆಶಯವೂ ಆಗಿದೆ.

ನಿನ್ನೆ ಇರಾನ್ ನ ವಿದೇಶಾಂಗ ಸಚಿವರ ಜೊತೆ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು. ಈ ಕುರಿತು ಇಸ್ರೇಲ್ ನಾಯಕತ್ವದ ಜೊತೆಗೂ ಮಾತನಾಡುವುದಾಗಿಯೂ ಅವರು ತಿಳಿಸಿದರು.

ಈ ನಡುವೆ ಇಸ್ರೇಲ್ ಗೆ ಸೇರಿದ್ದು ಎನ್ನಲಾದ ಸರಕು ಸಾಗಾಣಿಕಾ ಹಡಗನ್ನು ಇರಾನ್ ವಶಕ್ಕೆ ಪಡೆದುಕೊಂಡಿದೆ.
ಈ ಹಡಗಿನಲ್ಲಿ ಭಾರತದ 17 ಸಿಬ್ಬಂದಿಗಳೂ ಇದ್ದರು. ಈ ವಿಚಾರವನ್ನು ಇರಾನ್ ನ ಗಮನಕ್ಕೆ ತಂದ ಜಯಶಂಕರ್ ಭಾರತೀಯ ಅಧಿಕಾರಿಗಳು ಇವರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಇರಾನ್ ಒಪ್ಪಿದೆ.

ಇರಾನ್ ಪ್ರಕಾರ ಈ ಸರಕು ಸಾಗಾಣಿಕಾ ಹಡಗು ಗೂಢಚರ್ಯೆ ನಡೆಸುತ್ತಿತ್ತು. ಹೀಗಾಗಿ ತಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ಈ ಹಡಗನ್ನು ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *