ನವದೆಹಲಿ : ಇಶಾ ಫೌಂಡೇಶನ್ ನ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ದೆಹಲಿಯ ಆಸ್ಪತ್ರೆಯೋದರಲ್ಲಿ ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಮೆದುಳಿನಲ್ಲಿ ಆಗುತ್ತಿರುವ ರಕ್ತ ಸ್ರಾವವನ್ನು ತಡೆಯಲೂ ಈ ಶಸ್ತ್ರ ಚಿಕಿತ್ಸೆ ನಡೆಸಲಾಯಿತು ಎಂದು ಇಂದ್ರಪ್ರಸ್ತ ಆಪೋಲೋ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಮಾರ್ಚ್ 17 ರಂದು ಈ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವೆಂಟಿಲೇಟರ್ ನಿಂದ ಹೊರಗೆ ಬಂದಿದ್ದಾರೆ.
ಕರ್ನಾಟಕದ ಮೈಸೂರು ಮೂಲದವರಾದ ಜಗ್ಗಿ ವಾಸುದೇವ್ ಈಶಾ ಫೌಂಡೇಶನ್ ಸ್ಥಾಪಿಸಿ ದೇಶ ವಿದೇಶಗಳಲ್ಲಿ ಪ್ರಸಿದ್ಧರಾಗಿದ್ದಾರೆ. ತಮಿಳು ನಾಡಿನ ಕೊಯಮುತ್ತೂರಿನಲ್ಲಿ ತಮ್ಮ ಪ್ರಧಾನ ಆಶ್ರಮವನ್ನು ಅವರು ಸ್ಥಾಪಿಸಿದ್ದರು.
ಈಗ ಬೆಂಗಳೂರಿನ ಸಮೀಪ, ನಂಡಿ ಬೆಟ್ಟದ ಹತ್ತಿರ ತಮ್ಮ ಇನ್ನೊಂದು ಆಶ್ರಮವನ್ನು ಪ್ರಾರಂಭಿಸಿದ್ದಾರೆ. ಕಾವೇರಿ ಕಾಲಿಂಗ್, ಮಣ್ಣು ಉಳಿಸಿ ಮೊದಲಾದ ಅಭಿಯಾನವನ್ನು ಅವರು ನಡೆಸಿದ್ದರು
