: ಪ್ರಧಾನಿ ಮೋದಿಯನ್ನು ಚರ್ಚೆಗೆ ಆಹ್ವಾನಿಸಲು ರಾಹುಲ್​ ಗಾಂಧಿ ಯಾರು? ಪ್ರಧಾನಿ ಅಭ್ಯರ್ಥಿಯೇ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಪ್ರಶ್ನಿಸಿದ್ದಾರೆ. ಈ ಮೂಲಕ ಪಲಾಯನವಾದವನ್ನು ಅವರು ಅನುಸರಿಸುತ್ತಿದ್ದಾರೆ.
ಜೊತೆಗೆ ಭಾರತದ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜೊತೆ ಸಂವಾದ ಚರ್ಚೆ ನಡೆಸಲೇ ಇನ್ಯಾರ ಜೊತೆ ಮೋದಿ ಚರ್ಚೆ ನಡೆಸುತ್ತಾರೆ ? ಈ ಬಗ್ಗೆ ತೇಜಸ್ವಿ ಸೂರ್ಯ ಏನನ್ನೂ ಹೇಳಿಲ್ಲ.
ರಾಹುಲ್ ಗಾಂಧಿ ಅವರ ಬದಲಿಗೆ, ಅಮೇರಿಕ ಅಧ್ಯಕ್ಶರ ಜೊತೆ ರಷ್ಯಾ ಅಧ್ಯಕ್ಷರ ಜೊತೆ ಇಂಗ್ಲಂಡ್ ಪ್ರಧಾನಿ ಜೊತೆ ಮೋದಿ ಚರ್ಚೆ ನಡೆಸಲು ಬಯಸಿದ್ದಾರೆಯೆ ?
ಭಾರತದ ಗೋದಿ ಮೀಡಿಯಾದ ಸಂಪಾದಕರ ಜೊತೆ ಮಾತ ಪ್ರಧಾನಿ ಮಾತನಾಡುತ್ತಾರೆಯೆ ?
ಪೂರ್ವ ನಿರ್ಧಾರಿತ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ ಮಾತ್ರ ನಮ್ಮ ಪ್ರಧಾನಿ ಸೀಮಿತರಾಗುತ್ತಾರೆಯೆ ?
ಈ ಪ್ರಶ್ನೆಗಳಿಗೂ ತೇಜಸ್ವಿ ಸೂರ್ಯು ಉತ್ತರ ನೀಡಬೇಕಾಗಿದೆ. ಇದಕ್ಕೆ ಬದಲಾಗಿ
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ಮೋದಿಯನ್ನು ಚರ್ಚೆಗೆ ಆಹ್ವಾನಿಸಲು ರಾಹುಲ್​ ಗಾಂಧಿ ಯಾರು? ಪ್ರಧಾನಿ ಅಭ್ಯರ್ಥಿಯೇ? ಇಂಡಿಯಾ ಮೈತ್ರಿಯ ಮಾತು ಬಿಡಿ, ಮೊದಲು ಕಾಂಗ್ರೆಸ್​ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು, ಪಕ್ಷದ ಸೋಲಿನ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದಾಗಿ ಹೇಳಿದ ಬಳಿಕ ಪ್ರಧಾನಿ ಮೋದಿಯೊಂದಿಗೆ ಚರ್ಚೆ ಮಾಡಬಹುದು ಎಂದು ಹೇಳಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಇದೇ ಪ್ರಶ್ನೆ ಮಾಡಿದ್ದು, ರಾಹುಲ್​ ಗಾಂಧಿಗೆ ಸಾಮಾನ್ಯ ಬಿಜೆಪಿ ಕಾರ್ಯಕರ್ತನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವಿಲ್ಲ. ಎರಡನೆಯದಾಗಿ ಮೋದಿ ಸಮನಾಗಿ ಚರ್ಚಿಸಲು ಬಯಸುವವರು ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯೇ? ಎಂದು ಪ್ರಶ್ನೆ ಮಾಡಿದ್ದಾರೆ.​
ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಆರೋಪ-ಪ್ರತ್ಯಾರೋಪಗಳನ್ನು ಗಮನಿಸಿರುವ ಮಾಜಿ ನ್ಯಾಯಾಧೀಶರು ಮತ್ತು ಹಿರಿಯ ಪತ್ರಕರ್ತರು ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಯನ್ನು ಒಂದೇ ವೇದಿಕೆಯಲ್ಲಿ ಸಾರ್ವಜನಿಕ ಚರ್ಚೆಗೆ ಕರೆದಿದ್ದಾರೆ. ಈ ಚರ್ಚೆಯಲ್ಲಿ ಭಾಗಿಯಾಗಲು ರಾಹುಲ್‌ ಗಾಂಧಿ ಒಪ್ಪಿಕೊಂಡಿದ್ದು, ಲೋಕಸಭೆ ಚುನಾವಣೆಯ ಸಾರ್ವಜನಿಕ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಶೇ.100ರಷ್ಟು ಸಿದ್ಧ ಎಂದು ಹೇಳಿದ್ದರು,

Author

Leave a Reply

Your email address will not be published. Required fields are marked *