ನವದೆಹಲಿ : ಭಾರತದಲ್ಲಿ ಇರುವ ಶಿಲ್ಪ ತಂತ್ರಜ್ನಾನ ವಿಶ್ವದ ಎಲ್ಲೂ ಇಲ್ಲ. ಅಜಂತಾ ಎಲ್ಲೋರಾ ಶಿವ ದೇವಾಲಯದ ಹಾಗೆ ಹಲವು ದೇವಾಲಯಗಳು. ಈ ದೇವಾಲಯಗಳನ್ನು ನಿರ್ಮಿಸಿದ್ದು ಹೇಗೆ ಯಾರಿಗೂ ತಿಳಿಯದು.
ಈಗ ಆ ಜ್ಞಾನವೂ ಇಲ್ಲ. ಬುದ್ದಿಯೂ ಇಲ್ಲ. ಎಲ್ಲವೂ ಕೃತಕ. ಇವತ್ತು ರಾಮನ ಮೇಲೆ ಸೂರ್ಯ ತಿಲಕ ಬಂದಿದ್ದೇ ನೋಡಿ. ದೇವಾಲಯದ ಮೇಲ್ಮಹಡಿಯಲ್ಲಿ ಮಸೂರ ಮತ್ತು ರಿಫ್ಲೇಕ್ಟರ್ ಗಳನ್ನು ಇರಿಸಲಾಗಿದೆ. ಇದರ ಜೊತೆಗೆ ಕೊಳವೆಯನ್ನು ಅಳವಡಿಸಲಾಗಿದೆ.
ನಿರ್ಧಿಷ್ಟ ಸಮಯದಲ್ಲಿ ಸೂರ್ಯ ರಷ್ಮಿ ಕೊಳವೆಯ ಮೂಲಕ ಕೆಳಗಿರುವ ವಿಗ್ರಹದ ಹಣೆಗೆ ಬಂದು ತಗಲುತ್ತದೆ. ಇದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ರಶ್ಮಿ ಬೀಳುವಂತೆ ಮಾಡಬಹುದು. ಅಯೋಧ್ಯೆ ರಾಮ ಮಂದಿರ ಇಂದು ರಾಮ ನವಮಿ ದಿನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು ಎಂದು ಪ್ರಚಾರ ಮಾಡಲಾಗುತ್ತಿದೆ. ಈ ರೀತಿಯ ಪ್ರಚಾರ ಬೇಕಿತ್ತಾ ?
ಕಳೆದ ಜನವರಿ 22ರಂದು ಮಂದಿರ ನಿರ್ಮಾಣವಾಗಿ ಬಾಲರಾಮನ ಪ್ರತಿಷ್ಠೆ ಅದ್ದೂರಿಯಾಗಿ ಸಂಪ್ರದಾಯ ಗಳೊಂದಿಗೆ ನೆರವೇರಿತ್ತು. ರಾಮ ಲಲ್ಲಾ ಪ್ರತಿಷ್ಠಾಪನೆ ಹಾಗೂ ಉದ್ಘಾಟನೆ ನಂತರ ಮೊದಲ ರಾಮ ನವಮಿಯನ್ನು ಆಚರಣೆ ಇಂದು ನೆರವೇರಿತು.
.
